This is the title of the web page

ಮೊಬೈಲ್ ಚಾರ್ಜರ್ ನಿಂದ 3 ವರ್ಷದ ಮಗನ ಕತ್ತು ಹಿಸುಕಿ ಕೊಂದ ತಂದೆ

ವಿಜಯಪುರ, 10- ಎರಡನೇ ಹೆಂಡತಿಯ ಮಾತು ಕೇಳಿ ಮೊದಲನೆಯ ಹೆಂಡತಿಯ ಸುಮಾರು 3 ವರ್ಷದ ಮುಗ್ಧ ಮಗುವನ್ನು ತಂದೆಯೊಬ್ಬ ಮೊಬೈಲ್ ಚಾರ್ಜರ್ ವೈರ್ ನಿಂದ ಕತ್ತು ಹಿಸುಕಿ ಕೊಂದು ಹಾಕಿದ ಹೀನ ಕೃತ್ಯ ವಿಜಯಪುರ ತಾಲ್ಲೂಕಿನ ಮಿಂಚನಾಳ ತಾಂಡಾದಲ್ಲಿ ನಡೆದಿದೆ.

ಸುಮಿತ ವಿನೋದ ಚವ್ಹಾಣ ಹತ್ಯೆಯಾಗಿರುವ ದುರ್ದೈವಿ ಬಾಲಕನಾಗಿದ್ದು ತಂದೆ ವಿನೋದ ಚವ್ಹಾಣ ಹಾಗೂ ಮಲತಾಯಿ ಸವಿತಾ ಚವ್ಹಾಣಳಿಂದ ಹತ್ಯೆ ನಡೆದಿದೆ.

ಮೊದಲ ಹೆಂಡತಿಯ ಮತ್ತೊಬ್ಬ ಮಗ ಸಂಪತ್ ಅವರನ್ನೂ ಇದೇ ರೀತಿ ಹತ್ಯೆ ಮಾಡಲು ವಿನೋದ ಚವ್ಹಾಣ ಯತ್ನಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಸಂಪತ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೊದಲನೆಯ ಹೆಂಡತಿ ಅಸುನೀಗಿದ ನಂತರ ಸವಿತಾ ಎಂಬವಳನ್ನು ವಿನೋದ ಮದುವೆಯಾಗಿದ್ದ. ಮಕ್ಕಳ ಕೊಲೆ ಹಾಗೂ ಕೊಲೆ ಯತ್ನಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ವಿಜಯಪುರ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌.

You might also like
Leave a comment