This is the title of the web page

ಚಿತ್ರಮಂದಿರ, ಜಿಮ್, ಈಜುಕೊಳಗಳಿಗೆ ಹೊಸ ಮಾರ್ಗಸೂಚಿ

ಬೆಂಗಳೂರು, 4- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೋವಿಡ್ ಬಗ್ಗೆ ಸಭೆ ನಡೆಸಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ನಾಳೆಯಿಂದಲೇ  ಥಿಯೇಟರ್‌ ಮತ್ತು ಜಿಮ್ ಗಳನ್ನು ಪೂರ್ಣ ನಡೆಸಲು ಸರ್ಕಾರ ಅನುಮತಿ ನೀಡಲಾಗಿದೆ.

ಕೊರೋನಾ ಹಿನ್ನೆಲೆಯಲ್ಲಿ ಚಿತ್ರಮಂದಿರಗಳ ಮೇಲೆ ಹೇರಲಾಗಿದ್ದ ನಿಯಮವನ್ನು ರಾಜ್ಯ ಸರ್ಕಾರ ಸಡಿಲ ಗೊಳಿಸಿದ್ದು,  ಚಿತ್ರಮಂದಿರ ಮತ್ತು ಜಿಮ್ ಗಳಿಗೆ ಹೇರಲಾಗಿದ್ದ ಶೇ.50ರಷ್ಟು ಜಾಗ ಮಾತ್ರ ತುಂಬಬಹುದು ಎಂಬ ನಿರ್ಬಂಧವನ್ನು ತೆರವುಗೊಳಿಸಿದೆ.

ಚಲನಚಿತ್ರ ಮಂದಿರದೊಳಗೆ ಹೋಗುವವರು ಕಡ್ಡಾಯ ಮಾಸ್ಕ ಧರಿಸಬೇಕು, ಎರಡು ಡೋಸ್ ಲಸಿಕೆ ಕಡ್ಡಾಯವಾಗಿರುತ್ತದೆ. ತಿಂಡಿ ಪದಾರ್ಥಗಳನ್ನ ಥಿಯೇಟರ್ ಒಳಗೆ ತೆಗೆದುಕೊಂಡು ಹೋಗಲು ನಿಷೇಧ ಹೇರಲಾಗಿದ್ದು ವಿರಾಮದ ಸಂದರ್ಭದಲ್ಲಿ ಹೊರಗೆ ಬಂದು ತಿನ್ನಬಹುದು.

“ಡಿಸೆಂಬರ್ ಕೊನೆ ವಾರದಲ್ಲಿ ಓಮಿಕ್ರಾನ್ ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ಕೆಲ ಕ್ರಮ ತೆಗೆದುಕೊಂಡಿದ್ದೇವೆ. ನೈಟ್ ಕರ್ಫ್ಯೂ, ವೀಕೆಂಡ್ ಸೇರಿದಂತೆ ಹಲವು ನಿಯಮಗಳನ್ನು ಹಿಂದೆ ತೆಗೆದುಕೊಂಡಿದ್ದೆವು. ನಾಳೆಯಿಂದ 50% ನಿಯಮ ಸಡಿಲಿಸಿ ಚಲನ ಚಿತ್ರಮಂದಿರಗಳಿಗೆ, ಜಿಮ್, ಈಜುಕೊಳ, ಯೋಗ ಕೇಂದ್ರಗಳಿಗೂ 100% ಭರ್ತೀಗೆ ಅವಕಾಶ ನೀಡಲಾಗಿದೆ” ಎಂದು ಆರೋಗ್ಯ ಸಚಿವ ಕೆ. ಸುಧಾಕರ ಅವರು ಮಾಧ್ಯಮದವರಿಗೆ ಮಾಹಿತಿ ನೀಡಿದರು.

You might also like
Leave a comment