This is the title of the web page

ರಾಷ್ಟ್ರಗೀತೆ ಹಾಡುತ್ತಿರುವಾಗಲೇ ಕೊನೆಯುಸಿರೆಳೆದ ಹಿರಿಯ ಪತ್ರಕರ್ತ

ರಾಯಬಾಗ, 27- ಗಣರಾಜ್ಯೋತ್ಸವದ ದಿನ ರಾಷ್ಟ್ರಗೀತೆ ಹಾಡುತ್ತಿರುವಾಗಲೇ ಹಿರಿಯ ಪತ್ರಕರ್ತ ಅಬ್ದುಲರಜಾಕ ಅರಳೀಕಟ್ಟಿ ಅವರು ತೀವ್ರ ಹೃದಯಾಘಾತದಿಂದ ನಿಧನರಾದ ಘಟನೆ ರಾಯಬಾಗದಲ್ಲಿ ಬುಧವಾರ ಮುಂಜಾನೆ ಜರುಗಿದೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.

ಧ್ವಜಾರೋಹನ ಮಾಡಿ ಎಲ್ಲರೊಂದಿಗೆ ರಾಷ್ಟ್ರಗೀತೆ ಹಾಡುತ್ತಿರುವಾಗ ಅರಳೀಕಟ್ಟಿ ಅವರಿಗೆ ತೀವ್ರ ಹೃದಯಾಘಾತವಾಗಿ ಅಲ್ಲಿಯೇ ಅವರು ಕುಸಿದು ಬಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಗಲೇ ಅವರು ಕೊನೆಯುಸಿರೆಳೆದಿದ್ದರು.

ಸರಳ, ಸಜ್ಜನ, ಆದರ್ಶಜೀವಿಯಾಗಿದ್ದ ಅವರು ಹಲವು ದಶಕಗಳ ಕಾಲ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದರು ಮತ್ತು ರಾಯಬಾಗದಲ್ಲಿ ಪತ್ರಿಕೆಯೊಂದರ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರನ್ನು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.

ಬುಧವಾರ ಸಂಜೆ ಮೃತರ ಅಂತ್ಯಸಂಸ್ಕಾರ ರಾಯಬಾಗದಲ್ಲಿ ನಡೆಯಿತು. ಸಾವಿರಾರು ಹಿಂದೂ, ಮುಸ್ಲಿಮ ಸಮಾಜದ ಜನರು ಪಾಲ್ಗೊಂಡಿದ್ದರು.

 

 

You might also like
Leave a comment