This is the title of the web page

ಟಿವಿ ನೋಡಬೇಡ ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಗ

ಬೆಂಗಳೂರು, 10- ಇಂದಿನ ಯುವ ಪೀಳಿಗೆಗೆ ಏನಾಗಿದೆ ಎಂಬುದು ತಿಳಿಯದಾಗಿದ್ದು ಹೆಚ್ಚು ಟಿವಿ ನೋಡಬೇಡ ಎಂದು ತಂದೆ ಗದರಿಸಿ ಹೇಳಿದ್ದಕ್ಕೆ ಯುವಕನೊಬ್ಬ ಚೂರಿಯಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಜೆ.ಜೆ. ನಗರದ 11 ನೇ ಕ್ರಾಸ್ ನಲ್ಲಿ ಘಟನೆ ನಿನ್ನೆ ರವಿವಾರ ರಾತ್ರಿ ನಡೆದಿದೆ.

ಸಯ್ಯದ ಸಾಹೀಲ್ (23) ಎಂಬ ಯುವಕನೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಸಯ್ಯದ ದಿನದ ಹೆಚ್ಚು ಸಮಯ ಟಿವಿ‌ ನೋಡುವುದರಲ್ಲೇ ಮಗ್ನನಾಗಿರುತ್ತಿದ್ದನಂತೆ. ರವಿವಾರ ರಾತ್ರಿ 10 ಗಂಟೆ ಸುಮಾರಿಗೆ ಕೆಲಸದಿಂದ ಮನೆಗೆ ಬಂದ ತಂದೆ, ಟಿವಿ ನೋಡುತ್ತಿದ್ದ ಮಗನಿಗೆ ಹೆಚ್ಚು ಟಿವಿ ನೋಡಬಾರದೆಂದು ಕೋಪದಿಂದ ಬೈದಾಗ ನೇರವಾಗಿ ಅಡುಗೆ ಮನೆಗೆ ಹೋದ ಸಯ್ಯದ ಚಾಕುವಿನಿಂದ ಇರಿದುಕೊಂಡಿದ್ದಾನೆ.

ಆತನ ತಂದೆ-ತಾಯಿ ತಕ್ಷಣವೇ ಆತನನ್ನು ಆಸ್ಪತ್ರೆಗೆ ಒಯ್ದರಾದರೂ ಆಳವಾದ ಗಾಯ ಮತ್ತು ತೀವ್ರ ರಕ್ತಸ್ರಾವದಿಂದ ಆತ ಬದುಕುಳಿಯಲಿಲ್ಲ.

ಈ ಸಂಬಂಧ ಜೆ.ಜೆ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You might also like
Leave a comment