ಅಹಮದಾಬಾದ : ಮಹಿಳೆಯೊಬ್ಬರು ಅಹಮದಾಬಾದಿನ ಟ್ರಾಫಿಕ್ ಜಾಮ್ ಕಾರಣ ಗುರುವಾರ ವಿಮಾನ ನಿಲ್ದಾಣ ತಲುಪಲು ಹತ್ತು ನಿಮಿಷ ತಡವಾಗಿದ್ದರಿಂದ ಬದುಕುಳಿದ ಘಟನೆ ನಡೆದಿದೆ.
ಭರೂಚ ನಿವಾಸಿ ಭೂಮಿ ಚೌಹಾಣ ಅವರು ಗುರುವಾರ ಏರ್ ಇಂಡಿಯಾ ವಿಮಾನದ ಮೂಲಕ ಲಂಡನಗೆ ತೆರಳಬೇಕಿತ್ತು. ಕಾರಿನಲ್ಲಿ ವಿಮಾನ ನಿಲ್ದಾಣದತ್ತ ಹೊರಟಿದ್ದರು. ಆದರೆ ಅಹಮದಾಬಾದ ನಗರದಲ್ಲಿ ಟ್ರಾಫಿಕ್ ಜಾಮ್ ಆಗಿದ್ದರಿಂದ ಭೂಮಿ ಅವರು ವಿಮಾನ ನಿಲ್ದಾಣಕ್ಕೆ ತಲುಪುವಷ್ಟರಲ್ಲಿ ಹತ್ತು ನಿಮಿಷ ತಡವಾಗಿತ್ತು. ಆದರೆ ಅಷ್ಟು ಹೊತ್ತಿಗಾಗಲೇ ವಿಮಾನ ಟೇಕ್ ಆಫ್ ಆಗಿತ್ತು. ಇದರಿಂದ ನಿರಾಸೆಗೊಂಡಿದ್ದ ಭೂಮಿ ಅವರಿಗೆ ಕೆಲವೇ ನಿಮಿಷದಲ್ಲಿ ವಿಮಾನ ಅವಘಡ ಸಂಭವಿಸಿರುವ ಆಘಾತಕರ ಸುದ್ದಿ ಮುಟ್ಟಿದೆ.
ನಿಜಕ್ಕೂ ಇದು ನನ್ನ ಪುನರ್ಜನ್ಮ, ಟ್ರಾಫಿಕ್ ಜಾಮ್ ನಿಂದಾಗಿ ನನ್ನ ಜೀವ ಉಳಿಯಿತು ಎಂದು ಅವರು ಹೇಳಿಕೊಂಡಿದ್ದಾರೆ.