This is the title of the web page

ಜಿಯೋ ಕೇಬಲ್ ಜೋಡಿಸುವಾಗ ವಿದ್ಯುತ್ ತಗುಲಿ ಯುವಕನ ದಾರುಣ ಸಾವು

ಬೆಳಗಾವಿ, 7- ಕಂಬ ಏರಿ ಜಿಯೋ ಕಂಪನಿಯ ಅಪ್ಟಿಕಲ್ ಕೇಬಲ್ ಬಾಕ್ಸ್ ಕೂಡ್ರಿಸುವಾಗ ಆಕಸ್ಮಿಕವಾಗಿ ವಿದ್ಯುತ್ ಪ್ರಸರಣಗೊಂಡು ಯುವಕನೊಬ್ಬ ಅಸು ನೀಗಿದ ಘಟನೆ ನಿನ್ನೆ ರವಿವಾರ ಮುಂಜಾನೆ ಟಿಳಕವಾಡಿ ಮಂಡೊಳ್ಳಿ ರಸ್ತೆಯಲ್ಲಿ ಸಂಭವಿಸಿದೆ.

ಕಾಕತಿಯ ದೇಸಾಯಿ ಗಲ್ಲಿಯ ನಿವಾಸಿ 23 ವರ್ಷದ ಮಹೇಶ ಫಕೀರಪ್ಪ ಮುತ್ನಾಳಕರ ಎಂಬ ಯುವಕ ರವಿವಾರ ಮುಂಜಾನೆ 11 ಗಂಟೆ ಸುಮಾರಿಗೆ ಮೊದಲನೇ ರೇಲ್ವೆಯ ಗೇಟ್ ಬಳಿ ಇರುವ ಸಾಯಿರಾಜ ಅಪಾರ್ಟಮೆಂಟ್ ಎದುರಿನ ವಿದ್ಯುತ್ ಕಂಬ ಏರಿ ಕೇಬಲ್ ಫಿಕ್ಸ್ ಮಾಡುವಾಗ ಸ್ಥಗಿತಗೊಂಡಿದ್ದ ವಿದ್ಯುತ್ ಆಕಸ್ಮಿಕವಾಗಿ ಪ್ರಸರಣಗೊಂಡಿದ್ದರಿಂದ ವಿದ್ಯುತ್ ತಗಲಿ ಯುವಕ ಕಂಬದಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡರು ಎನ್ನಲಾಗಿದೆ.

ಕೂಡಲೇ ಅವರನ್ನು ಸಮೀಪದ ಲೋಟಸ್ ಆಸ್ಪತ್ರೆಗೆ ಸಾಗಿಸಲಾಯಿತು. ಗಂಭೀರ ಗಾಯವಾಗಿದ್ದ ಕಾರಣ ನಂತರ ಅವರನ್ನು ಕೆಎಲ್ಇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಮಧ್ಯಾಹ್ನ 2.40 ರ ವೇಳೆಗೆ ಆತ ನಿಧನರಾದರು.

ಈ ಘಟನೆಗೆ ಸಂಬಂಧಿಸಿದಂತೆ ಜಿಯೋ ಕಂಪನಿ ನಿರ್ವಾಹಕ ಹಾಗು ಇತರ ಮೂವರ ವಿರುದ್ಧ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

You might also like
Leave a comment