ಗದಗ: ಗಣೇಶ ವಿಸರ್ಜನೆ ವೇಳೆ ದುಷ್ಕರ್ಮಿಗಳು ಚಾಕು ಇರಿತಕ್ಕೆ ಯುವಕ ಸಾವನ್ನಪ್ಪಿರುವಂತಹ ಘಟನೆ ಗದಗ ತೋಂಟದಾರ್ಯ ಮಠದ ಬಳಿ ತಡರಾತ್ರಿ ನಡೆದಿದೆ.
ಸುದೀಪ ಮುಂಡೆವಾಡಿ(22) ಕೊಲೆಯಾದ ಯುವಕ. ಸ್ನೇಹಿತರೇ ಚಾಕು ಇರಿದಿರುವ ಆರೋಪ ಮಾಡಿದ್ದು, ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಯಲ್ಲಿ ಸುದೀಪ ಸಾವನ್ನಪ್ಪಿದ್ದಾನೆ. ಸುದೀಪ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಗದಗ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.