This is the title of the web page

ಸಿದ್ಧ ಉಡುಪು ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಯುವತಿ ನಾಪತ್ತೆ

 

ಬೆಳಗಾವಿ, ೩- ನಗರದ ಜಿಲ್ಲಾ ಆಸ್ಪತ್ರೆ ಎದುರಿನ ಬಿ.ಆರ್. ಅಂಬೇಡ್ಕರ್ ರಸ್ತೆಯಲ್ಲಿ ಇರುವ ಪ್ರಸಿದ್ಧ ರೆಡಿಮೇಡ್ ಬಟ್ಟೆಗಳ ಮಾರಾಟ ಅಂಗಡಿಯಲ್ಲಿ ಕೆಲಸಕ್ಕಿದ್ದ ಬಿ.ಕೆ. ಕಂಗ್ರಾಳಿ ಗ್ರಾಮದ ಕೋಮಲಾ ಕಲ್ಲಪ್ಪ ಬೆಳಗಾವಕರ ಎಂಬ ಯುವತಿ ಕಳೆದ ಜೂನ್ 1ನೇ ತಾರೀಖಿನಿಂದ ಕಾಣೆಯಾಗಿದ್ದಾಳೆ.

ಮೂಲತಃ ಖಾನಾಪುರ ತಾಲೂಕಿನ ಘೋಡಗೇರಿ ಗ್ರಾಮದವರಾದ ಕೋಮಲಾ ಕೆಲವು ವರುಷಗಳಿಂದ ಬಿಕೆ ಕಂಗ್ರಾಳಿ ಗ್ರಾಮದಲ್ಲಿ ವಾಸವಾಗಿದ್ದರು. 24 ವರುಷದ ಕೋಮಲಾ ಬ್ರಾಂಡೆಡ್ ಉಡುಪು ಮಾರಾಟದ ಕೇಂದ್ರದಲ್ಲಿ ಕೆಲಸಕ್ಕಿದ್ದರು.

ಅವರ ಪಾಲಕರು ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಜೂನ್ 1ರಂದು ಮುಂಜಾನೆ 9 ಗಂಟೆ ಸುಮಾರಿಗೆ ಮನೆಯಿಂದ ಕೆಲಸಕ್ಕೆ ತೆರಳಿದ್ದ ಮಗಳು ಮರಳಿ ಬಂದಿಲ್ಲವೆಂದು ತಿಳಿಸಿದ್ದಾರೆ.

You might also like
Leave a comment