This is the title of the web page

ಉಕ್ರೇನ್ ಮೇಲೆ ದಾಳಿ ಅನಿವಾರ್ಯವಾಗಿತ್ತು -ಅಭಯ ಕುಮಾರ

ಮಾಸ್ಕೋ, 3- ಉಕ್ರೇನ್ ಮೇಲೆ ರಶಿಯಾ ನಡೆಸಿರುವ ದಾಳಿಯನ್ನು ರಶಿಯಾ ಶಾಸಕರೊಬ್ಬರು ಸಮರ್ಥಿಸಿಕೊಂಡಿದ್ದಾರೆ. ಬಿಹಾರ ಮೂಲದ ಡಾ. ಅಭಯ ಕುಮಾರ ಸಿಂಗ್ ಎಂಬುವವರು ಸದ್ಯ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಸಂಪುಟದಲ್ಲಿ ಜನಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದಾರೆ.

ಪುತಿನ್ ಅವರ ಯುನೈಟೆಡ್ ರಷ್ಯಾ ಪಾರ್ಟಿಯ ಸದಸ್ಯರಾಗಿರುವ ಅಭಯ ಕುಮಾರ ಅವರು ಈ ದಾಳಿಗೂ ಮುಂಚೆ ಉಕ್ರೇನ್ ದೇಶಕ್ಕೆ ಮಾತುಕತೆ ನಡೆಸಲು ಸಾಕಷ್ಟು ಅವಕಾಶ ನೀಡಿತ್ತು, ಆದರೆ ಅಮೇರಿಕ ಮತ್ತು ನ್ಯಾಟೋ ಕುಮ್ಮಕ್ಕಿನ ಕಾರಣ ಉಕ್ರೇನ್ ಮುಂದೆ ಬರಲಿಲ್ಲ. ಹೀಗಾಗಿ, ರಷ್ಯಾ ಅಧ್ಯಕ್ಷರಿಗೆ ಹಾಗೂ ಸಂಸತ್ತಿಗೆ ಉಕ್ರೇನ್ ಮೇಲೆ ದಾಳಿ ಮಾಡದ ಹೊರತು ಮತ್ಯಾವುದೇ ಆಯ್ಕೆಗಳಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಉಕ್ರೇನ್ ಮೇಲೆ ಯಾವುದೇ ರೀತಿಯ ನ್ಯೂಕ್ಲಿಯರ್ ಬಾಂಬ್ ಪ್ರಯೋಗಿಸುವ ಸಾಧ್ಯತೆಯನ್ನು ಅವರು ತಳ್ಳಿಹಾಕಿದ್ದಾರೆ ಎಂದು ಹೇಳಲಾಗಿದೆ.

ಡಾ. ಅಭಯ ಕುಮಾರ ಸಿಂಗ್ ಅವರು ಮೂಲತಃ ಭಾರತದ ಬಿಹಾರ ರಾಜ್ಯದ ಪಾಟ್ನಾದವರಾಗಿದ್ದು 1991ರಲ್ಲಿ ಅವರು ವೈದ್ಯಕೀಯ ಶಿಕ್ಷಣ ಪಡೆಯಲು ರಷ್ಯಾಗೆ ತೆರಳಿದ್ದರು. ಬಳಿಕ ಅವರು ಭಾರತಕ್ಕೆ ಮರಳಿ ವೈದ್ಯಕೀಯ ವೃತ್ತಿ ಅಭ್ಯಸಿಸುವ ಉದ್ದೇಶ ಹೊಂದಿದ್ದರು. ನಂತರ ಅವರು ಮತ್ತೆ ಅವರು ರಷ್ಯಾಗೆ ಹಿಂತಿರುಗಿ ಅಲ್ಲಿ ಫಾರ್ಮಾ ವ್ಯಾಪಾರದಲ್ಲಿ ತೊಡಗಿಸಿಕೊಂಡರು. 2015ರಲ್ಲಿ ಪುಟಿನ್ ಅವರ ಪಕ್ಷವನ್ನು ಸೇರಿದ ಅವರು 2018ರಲ್ಲಿ ಪಶ್ಚಿಮ ರಷ್ಯಾದ ಖುರ್ಸ್ಕ್ ಪ್ರದೇಶದಲ್ಲಿ ಪ್ರಾಂತೀಯ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು.

ಈಗ ಉಕ್ರೇನ್ ಬೆಂಬಲಿಸಿ ಬೇರೆ ಯಾವುದೇ ದೇಶ ರಷ್ಯಾದ ಮೇಲೆ ಆಕ್ರಮಣ ಮಾಡಿದರೆ ಅದಕ್ಕೆ ಪ್ರತ್ಯುತ್ತರ ನೀಡಲು ಸಮರ್ಥರಾಗುವ ನಿಟ್ಟಿನಲ್ಲಿ ನ್ಯೂಕ್ಲಿಯರ್ ಬಾಂಬ್ ಗಳನ್ನು ತಯಾರು ಇಡಲು ಸೂಚಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಚೀನಾ ದೇಶವು ಒಂದು ವೇಳೆ ಬಾಂಗ್ಲಾ ದೇಶದಲ್ಲಿ ತನ್ನ ಸೈನ್ಯದ ನೆಲೆಗಳನ್ನು ನಿರ್ಮಿಸಿದರೆ ಭಾರತಕ್ಕೆ ಏನು ಅನಿಸಬಹುದು ಎಂದು ಅವರು ಪ್ರಶ್ನೆ ಕೇಳಿದ್ದಾರೆ.

ಅದರಂತೆ, ಅಮೇರಿಕದ ಕುಮ್ಮಕ್ಕಿನ ಕಾರಣ ಉಕ್ರೇನ್ ನ್ಯಾಟೊ ಕಾರ್ಯಪಡೆಯೊಂದಿಗೆ ಸೇರಿದರೆ ನ್ಯಾಟೊ ತನ್ನ ಸೈನ್ಯವನ್ನು ಉಕ್ರೇನ್ ದೇಶದಲ್ಲಿ ನಿಯೋಜಿಸುತ್ತದೆ ಹಾಗೂ ಉಕ್ರೇನ್ ನಮ್ಮ ನೆರೆಯ ದೇಶವಾಗಿದೆ. ಇದು ಈ ಹಿಂದೆ ಮಾಡಲಾದ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಅಭಯ ಕುಮಾರ ಹೇಳಿದ್ದಾರೆ.

You might also like
Leave a comment