This is the title of the web page

ವಿವಾದಾತ್ಮಕ ಪೋಸ್ಟ ಹಾಕಿದ ಅಭಿಷೇಕ ಹಿರೇಮಠಗೆ ಪರೀಕ್ಷೆ ಬರೆಯಲು ಅನುಮತಿ ಕೋರಿ ಕೋರ್ಟಗೆ ಮನವಿ

ಹುಬ್ಬಳ್ಳಿ, ೧೯- ವಿವಾದಾತ್ಮಕ ಪೋಸ್ಟ ಹಾಕಿ ಹುಬ್ಬಳ್ಳಿಯಲ್ಲಿ ಭಾರಿ ಕೋಮು ಹಿಂಸಾಚಾರಕ್ಕೆ ಕಾರಣಕರ್ತನಾದ ಯುವಕ ಅಭಿಷೇಕ ಹಿರೇಮಠಗೆ ಪಿಯುಸಿ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಕೋರ್ಟಗೆ ಆರೋಪಿ ಪರ ವಕೀಲ ಸಂಜು ಬಡಾಸ್ಕರ ಮನವಿ ಮಾಡಿದ್ದಾರೆ.

ಪ್ರಕರಣ ಸಂಬಂಧ ಆರೋಪಿ ಅಭಿಷೇಕ ಹಿರೇಮಠ ನನ್ನು ವಶಕ್ಕೆ ಪಡೆದಿದ್ದ ಹಳೆ ಟೌನ್ ಪೊಲೀಸರು ನಾಲ್ಕನೇ ನ್ಯಾಯಾಂಗ ಪ್ರಥಮ ದರ್ಜೆ ಮತ್ತು ಹೆಚ್ಚುವರಿ ಸತ್ರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ವಶಕ್ಕೆ ಪಡೆದ ಬಳಿಕ ಹುಬ್ಬಳ್ಳಿ ಉಪ ಕಾರಾಗೃಹಕ್ಕೆ ಕಳುಹಿಸಿದರು. ಅಭಿಷೇಕ ಹಿರೇಮಠನನ್ನು ಎಪ್ರಿಲ್ 30 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ವಕೀಲರ ವೇದಿಕೆಯು ಅಭಿಷೇಕ ಹಿರೇಮಠ ಪರ ವಾದ ಮಂಡಿಸಿದ್ದು, ಸರಕಾರ ನ್ಯಾಯಾಲಯದಲ್ಲಿ ವಾದ ಮಂಡಿಸಲಿದೆ. ನಾವು ಹಿರೇಮಠ ಪರವಾಗಿ ವಾದ ಮಂಡಿಸಿ ಹಿರೇಮಠ‌ಗೆ ಪದವಿ ಪೂರ್ವ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಲಾಗುವುದು ಎಂದು ವಕೀಲ ಸಂಜು ಬಡಾಸ್ಕರ ಹೇಳಿದ್ದಾರೆ.

You might also like
Leave a comment