This is the title of the web page

ಎಸಿಬಿ ದಾಳಿ; ವಿದೇಶಿ ಕರೆನ್ಸಿ ಪತ್ತೆ

ಬೆಂಗಳೂರು/ಬೆಳಗಾವಿ, 24- ಅಕ್ರಮವಾಗಿ ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿದ ಮಾಹಿತಿ ಮೇರೆಗೆ ಕರ್ನಾಟಕ ಭ್ರಷ್ಟಾಚಾರ ನಿಯಂತ್ರಣ ಇಲಾಖೆಯು ಬೆಳಗಾವಿಯ ಮೂವರು ಅಧಿಕಾರಿಗಳು ಸೇರಿದಂತೆ ಒಟ್ಟು 60 ಅಧಿಕಾರಿಗಳ ಗೃಹ, ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದೆ.

ಬೆಳಗಾವಿ ಹೆಸ್ಕಾಂ ವಿಭಾಗದ ಗ್ರೂಪ್ ಸಿ ನೌಕರ ನೇತಾಜಿ ಪಾಟೀಲ, ಬೆಳಗಾವಿಯ ಆರ್ ಟಿ ಒ ವೆಹಿಕಲ್ ಇನ್ಸ್ ಪೆಕ್ಟರ್ ಸದಾಶಿವ ಮರಲಿಂಗಣ್ಣನವರ ಅವರ ಬೈಲಹೊಂಗಲದ ಹಾಗು ಗೋಕಾಕನ ಸಹಕಾರಿ ಅಭಿವೃದ್ಧಿ ಅಧಿಕಾರಿ ಎ.ಕೆ.ಮಾಸ್ತಿ ಅವರ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿದೆ.

ಹೆಸ್ಕಾಂ ನ ಪಾಟೀಲ ಮನೆಯಲ್ಲಿ ವಿದೇಶಿ ಕರೆನ್ಸಿ ಪತ್ತೆಯಾಗಿವೆ ಎನ್ನಲಾಗಿದೆ.

ಎಸಿಬಿ ಎಸ್ ಪಿ ಬಿ ಎಸ್ ನೇಮಗೌಡ ನೇತೃತ್ವದಲ್ಲಿ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

You might also like
Leave a comment