This is the title of the web page

ತಿಂಗಳಾಂತ್ಯಕ್ಕೆ ನಿವೃತ್ತಿ ಅಂಚಿನಲ್ಲಿದ್ದ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ 

 

ಬೆಳಗಾವಿ, ೧೭- ಇದೇ ತಿಂಗಳು 30 ರಂದು ನಿವೃತ್ತಿಯಾಗಬೇಕಿದ್ದ ಲೋಕೋಪಯೋಗಿ ಅಧೀಕ್ಷಕರ ಮನೆ ಹಾಗೂ ಕಚೇರಿಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಬೆಳಗಿನ ಜಾವ ಲೋಕೋಪಯೋಗಿ ಅಧೀಕ್ಷಕ ಬಿ ವೈ ಪವಾರ ಮನೆ ಹಾಗೂ ಕಚೇರಿಯ ಮೇಲೆ 25ಕ್ಕೂ ಅಧಿಕಾರಿಳು ದಾಳಿ ನಡೆಸಿದ್ದಾರೆ.

ತಿಂಗಳಾಂತ್ಯಕ್ಕೆ ನಿವೃತ್ತಿ ಅಂಚಿನಲ್ಲಿದ್ದ ಹಿರಿಯ ಅಧಿಕಾರಿ ಬಿ.ವೈ ಪವಾರ ಮನೆ ಮೇಲೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಬೆಳಗಾವಿಯ ಜಕ್ಕೇರಿ ಹೊಂಡದಲ್ಲಿರುವ ಮನೆ, ಕಚೇರಿ ಹಾಗೂ ಸರ್ಕಾರಿ ನಿವಾಸದ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ನಿಪ್ಪಾಣಿ ಮನೆ, ಬೋರಗಾಂವಿನಲ್ಲಿರುವ ಕಾರ್ಖಾನೆ ಸೇರಿದಂತೆ ಒಟ್ಟು 6 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ.

You might also like
Leave a comment