This is the title of the web page

ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಕೃಷಿ ಅಧಿಕಾರಿ

 

ಬೆಳಗಾವಿ : ಸಿಟಿ ಕಂಪೋಸ್ಟ್ ಮಾರ್ಕೆಟ್ ಲೈಸನ್ಸ್ ನೀಡಲು 20 ಸಾವಿರ ರೂ.‌ಲಂಚ‌ ಪಡೆಯುತ್ತಿದ್ದ ಕೃಷಿ ಅಧಿಕಾರಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಬೆಳಗಾವಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಅಧಿಕಾರಿ ಯೋಗೇಶ ಅಗಡಿ ಎಸಿಬಿ ಬಲೆಗೆ ಬಿದ್ದಿದ್ದು, ಕಚೇರಿಯಲ್ಲಿ 44 ಸಾವಿರ ಹಾಗೂ ಮನೆಯಲ್ಲಿ 3.54 ಲಕ್ಷ ರೂಪಾಯಿ ಹಣ ಪತ್ತೆಯಾಗಿವೆ.

ಅನಗೋಳದ ಮೋನೇಶ್ವರ ಎಂಬವರು ಸಿಟಿ ಕಂಪೋಸ್ಟ ಮಾರ್ಕೆಟ್ ಲೈಸನ್ಸ ಪಡೆಯಲು ಅರ್ಜಿ‌ ಸಲ್ಲಿಸಿದ್ದರು.
ಇದನ್ನು ಅಪ್‌ಲೋಡ್ ಮಾಡಲು ಅಧಿಕಾರಿ ಯೋಗೇಶ ಅಗಡಿ 30 ಸಾವಿರ ಲಂಚ ಕೇಳಿದ್ದರು. ಮುಂಗಡವಾಗಿ 20 ಸಾವಿರ ರೂಪಾಯಿ ಪಡೆಯುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

You might also like
Leave a comment