This is the title of the web page

ಧಾರವಾಡ ಬಳಿ ಭೀಕರ ಅಪಘಾತ ; ೭ ಸಾವು, ೧೩ ಜನರಿಗೆ ಗಾಯ

 

ಧಾರವಾಡ, ೨೧- ಮದುವೆ ನಿಶ್ಚಿತಾರ್ಥ ಮುಗಿಸಿ ಬರುತ್ತಿದ್ದ ಜೀಪ್ ಮರಕ್ಕೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಏಳು ಜನರು ಸ್ಥಳದಲ್ಲೇ ಸಾವಿಗೀಡಾಗಿದ್ದು ಹದಿಮೂರು ಜನರು ಗಾಯಗೊಂಡಿದ್ದಾರೆ.

ಈ ಘಟನೆ ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಡ ಗ್ರಾಮದ ಬಳಿ ನಡೆದಿದೆ.

ಅಪಘಾತಕ್ಕೀಡಾದ ಕ್ರೂಸರ್ ನಲ್ಲಿ 20ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು. ಮದುವೆ ಹಿಂದಿನ ದಿನ ನಿಶ್ಚಿತಾರ್ಥ ಮುಗಿಸಿ ಮನ್ಸೂರು ಗ್ರಾಮದಿಂದ ಬೆನಕಟ್ಟಿ ಗ್ರಾಮಕ್ಕೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ವಾಹನ ಮರಕ್ಕೆ ವಾಹನ ಢಿಕ್ಕಿಯಾಗಿದೆ.

ಮೃತರೆಲ್ಲರೂ ಮದುವೆ ಗಂಡಿನ ಸಂಬಂಧಿಕರು ಎಂದು ಹೇಳಲಾಗಿದ್ದು, ಅನನ್ಯ(14), ಹರೀಶ(13), ಶಿಲ್ಪಾ (34) ,ನೀಲವ್ವ(60) ಮಧುಶ್ರೀ(20), ಮಹೇಶ್ವರಯ್ಯ (11) ಹಾಗೂ ಶಂಭುಲಿಂಗಯ್ಯ (35) ಎಂದು ಹೇಳಲಾಗಿದೆ.

ಮದುವೆಗೂ ಮುನ್ನ ಬೆಳಿಗ್ಗೆ ನಿಗದಿ ಗ್ರಾಮದಲ್ಲಿ ನಡೆಯಬೇಕಿದ್ದ ಮತ್ತೊಂದು ದೇವರ ಕಾರ್ಯಕ್ಕಾಗಿ ಮಧ್ಯ ರಾತ್ರಿಯೇ ಸಂಬಂಧಿಗಳು ಹೊರಟಿದ್ದರು ಎಂದು ಹೇಳಲಾಗಿದೆ.

ಸ್ಥಳಕ್ಕೆ ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾತ್ರಿ 1.30ರಿಂದ 2 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಕೃಷ್ಣಕಾಂತ ಹೇಳಿದ್ದಾರೆ.

You might also like
Leave a comment