Live Stream

November 2022
W T F S S M T
 1
2345678
9101112131415
16171819202122
23242526272829
30  

| Latest Version 8.2.9 |

National News

950 ರೂ.ಗಾಗಿ ಯುವಕನ ಮೇಲೆ ಆಸಿಡ್​​ ದಾಳಿ


ಪಾಟ್ನಾ : 950 ರೂಪಾಯಿ ಸಾಲದ ಹಣವನ್ನು ವ್ಯಕ್ತಿಯೊಬ್ಬರು ಮರು ಪಾವತಿಸಿಲ್ಲ ಎಂಬ ಕಾರಣಕ್ಕೆ ಯುವಕನ ಮೇಲೆ ಆಸಿಡ್​​ ದಾಳಿ ನಡೆಸಿರುವ ಘಟನೆ ಬಿಹಾರದ ಸುಪೌಲ್​ ಜಿಲ್ಲೆಯಲ್ಲಿ ನಡೆದಿದೆ.

ದಾಳಿಯಲ್ಲಿ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲೆಯ ಸದರ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಜಿಲ್ಲೆಯ ಕಿಶನಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕತ್ರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗಾಯಾಳು ಅರ್ಜುನ ಮುಖಿ ಮೇಲೆ ಅದೇ ಗ್ರಾಮದ ಗಣೇಶ ಸ್ವರ್ಣಕರ ಹಾಗೂ ಅವರ ಪುತ್ರಿ ಆಸಿಡ್ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಕೇವಲ 950 ರೂಪಾಯಿ ಸಾಲವನ್ನು ಸಂತ್ರಸ್ತ ಯುವಕ ಪಡೆದಿದ್ದ. ಈ ಹಣವನ್ನು ಕೊಡದಿದ್ದಕ್ಕೆ ಆಸಿಡ್​ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

ಗಾಯಾಳು ಅರ್ಜುನ್ ಮುಖಿಯನ್ನು ಕುಟುಂಬಸ್ಥರು ಮೊದಲು ಚಿಕಿತ್ಸೆಗಾಗಿ ಕಿಶನಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಪ್ರಥಮ ಚಿಕಿತ್ಸೆಯ ನಂತರ, ಅವರನ್ನು ಸುಪಾಲ್ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


A B Dharwadkar
the authorA B Dharwadkar

Leave a Reply