This is the title of the web page

ಸಾಕ್ಷಾಧಾರ ಕೊರತೆ; ಕರವೇ ಕಾರ್ಯಕರ್ತರು ನಿರ್ದೋಷಿ

ಬೆಳಗಾವಿ, 24- 2011 ರ ನವೆಂಬರ್ ನಲ್ಲಿ ಬೆಳಗಾವಿ ಮಹಾನಗರಪಾಲಿಕೆಯ ಮಹಾಪೌರ ಹಾಗೂ ಉಪಮಹಾಪೌರ ಕಚೇರಿಗಳ ಮೇಲೆ ದಾಳಿ ಮಾಡಿ ಪಿಠೋಪಕರಣ ಧ್ವಂಸ ಮಾಡಿ ನಾಮಫಲಕಗಳಿಗೆ ಕಪ್ಪು ಮಸಿ ಬಳೆದ ಪ್ರಕರಣದ ತನಿಖೆ ಎದುರಿಸುತಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಎಲ್ಲ 40 ಕಾರ್ಯಕರ್ತರನ್ನೂ ನ್ಯಾಯಾಲಯ ಖುಲಾಸೆಗೊಳಿಸಿದೆ.

2011 ರ ಕರ್ನಾಟಕ ರಾಜ್ಯೋತ್ಸವದಂದು ಬೆಳಗಾವಿಯ ಮಹಾಪೌರ ಹಾಗೂ ಉಪಮಹಾಪೌರರು ರಾಜ್ಯ ವಿರೋಧಿ ಸಂಘಟನೆ ಮಹಾರಾಷ್ಟ್ರ ಏಕೀಕರಣ ಸಮಿತಿ ಆಯೋಜಿಸಿದ್ದ ‘ಕಪ್ಪು ದಿನ’ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಇದಕ್ಕೆ ಆಕ್ರೋಶಗೊಂಡ ಕರವೇ ಕಾರ್ಯಕರ್ತರು ಅವರ ಕಛೇರಿ ಮೇಲೆ ದಾಳಿ ಮಾಡಿದ್ದರು. ಪೊಲೀಸರು 40 ಕಾರ್ಯಕರ್ತರನ್ನು ಬಂಧಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.

ವಿಚಾರಣೆ ನಡೆಸಿದ್ದ 4ನೇ ಜೆಎಂಎಫ್ ಸಿ ನ್ಯಾಯಾಲಯವು ದಾಖಲಿಸಿದ ಆರೋಪಗಳನ್ನು ಸಾಬೀತು ಪಡಿಸಲು ದಾಖಲೆಗಳ ಕೊರತೆ ಕಾರಣ ನೀಡಿ ಎಲ್ಲರನ್ನೂ ಖುಲಾಸೆಗೊಳಿಸಿದೆ. ವೇದಿಕೆಯ ಆಗಿನ ಅಧ್ಯಕ್ಷ ಮಹಾದೇವ ತಳವಾರ, ಗಣೇಶ ರೋಕಡೆ ಆದಿ ಬಂಧಿತರಾಗಿ ಪ್ರಕರಣ ಎದುರಿಸುತ್ತಿದ್ದರು.

You might also like
Leave a comment