This is the title of the web page

ಸಹ ನಟ ಸತೀಶ ವಜ್ರನ ಬರ್ಬರ ಹತ್ಯೆ 

 

ಬೆಂಗಳೂರು, ೧೮-  ಭಾಮೈದನೇ ಸಹ ನಟನೊಬ್ಬನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ. ರಾಜರಾಜೇಶ್ವರಿ ನಗರದಲ್ಲಿ ಸಹ ನಟ ಸತೀಶ ವಜ್ರ (36) ಎಂಬಾತನನ್ನು ಆತನ ಭಾಮೈದನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಲಗೋರಿ ಚಿತ್ರದಲ್ಲಿ ಸಹ ನಟನಾಗಿ ಸತೀಶ ವಜ್ರ ನಟಿಸಿದ್ದರು. ಇಂದು ಸತೀಶ ವಜ್ರ ಹಾಗೂ ಆತನ ಪತ್ನಿಯ ಸಹೋದರನ  ನಡುವಿನ ವೈಮನಸ್ಸಿನಿಂದ ಸತೀಶನನ್ನು ಚಾಕುವಿನಿಂದ ಇರಿದು ಆತನ ಮನೆಯಲ್ಲಿಯೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

You might also like
Leave a comment