ಬೆಳಗಾವಿ : ಜಾಗತಿಕವಾಗಿ ಗುರುತಿಸಲ್ಪಟ್ಟ ಫ್ಯಾಷನ್ ಬ್ರ್ಯಾಂಡ್ “ಬಿಯಿಂಗ್ ಹ್ಯೂಮನ್” ಕ್ಲೋಥಿಂಗ್, ಕರ್ನಾಟಕದ ಬೆಳಗಾವಿಯಲ್ಲಿ ತನ್ನ ಹೊಸ ಅಂಗಡಿಯನ್ನು ಆರಂಭಿಸಿದೆ.
ಬೆಳಗಾವಿ ಅಂಬೇಡ್ಕರ್ ರಸ್ತೆಯಲ್ಲಿ ಆರಂಭವಾದ ಬಿಯಿಂಗ್ ಹ್ಯೂಮನ್ ಕ್ಲೋಥಿಂಗ್ ಮಳಿಗೆಯನ್ನು ಖ್ಯಾತ ಹಿಂದಿ ಚಿತ್ರನಟ ಸೋಹೈಲ್ ಖಾನ್ ರವಿವಾರ ಉದ್ಘಾಟಿಸಿದರು. ಶಾಸಕ ಆಸೀಫ ಸೇಠ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ವಿವೇಕ ಸಂದ್ವಾರ, ಅಯಾನ್ ಅಗ್ನಿಹೋತ್ರಿ ಈ ಸಂದರ್ಭದಲ್ಲಿ ಹಾಜರಿದ್ದರು.
2012ರಲ್ಲಿ ಸ್ಥಾಪಿತವಾದ ಬಿಯಿಂಗ್ ಹ್ಯೂಮನ್ ಕ್ಲೋಥಿಂಗ್, 15 ದೇಶಗಳಲ್ಲಿ ತನ್ನ ಜನಪ್ರಿಯತೆ ಗಳಿಸಿದೆ, ಹೆಚ್ಚಿನ ದೇಣಿಗೆ ಮಿಷನ್ನೊಂದಿಗೆ ಉನ್ನತ ಮಟ್ಟದ ಫ್ಯಾಷನ್ ಅನ್ನು ಇದು ಒದಗಿಸುತ್ತಿದೆ.
“ನಮ್ಮ ಬೆಳಗಾವಿಯ ಹೊಸ ಅಂಗಡಿ ಭೌಗೋಳಿಕ ವಿಸ್ತರಣೆಯಷ್ಟೇ ಅಲ್ಲ, ಇದು ಸಮುದಾಯ ಮತ್ತು ಒಳಗೊಂಡಿರುವಿಕೆಯ ಬಗ್ಗೆ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ನಾವು ಹೊಳೆಯುವ ಜಾಗತಿಕ ನಗರಗಳಿಂದ ಇತಿಹಾಸ ಸೃಷ್ಟಿಸುತ್ತಿರುವ ಭಾರತದ ಉಪನಗರಗಳವರೆಗೆ ನಮ್ಮ ಬ್ರ್ಯಾಂಡ್ ವಿಸ್ತರಿಸುತ್ತಿದ್ದು ನಮ್ಮ ವಿಶಿಷ್ಟ ಫ್ಯಾಷನ್ ಮತ್ತು ಸಾಮಾಜಿಕ ಜವಾಬ್ದಾರಿಯ ಬದ್ಧತೆಯನ್ನು ಈ ಬೆಳೆಯುತ್ತಿರುವ ನಗರಗಳಿಗೆ ತಂದು, ಭಾರತದಾದ್ಯಂತ ಯುವ ಜನಾಂಗದ ಪ್ರಬಲ ಭವಿಷ್ಯವನ್ನು ಬೆಂಬಲಿಸುವುದು ಮತ್ತು ಹಬ್ಬಿಸುವುದು ನಮ್ಮ ಉದ್ದೇಶವಾಗಿದೆ” ಎಂದು ಬಿಯಿಂಗ್ ಹ್ಯೂಮನ್ ಕ್ಲೋಥಿಂಗ್ ಸಿಒಒ ವಿವೇಕ ಸಂಧ್ವಾರ ಈ ಸಂದರ್ಭದಲ್ಲಿ ಹೇಳಿದರು.
ಗ್ರಾಹಕರು ಈಗ ಹೊಸ ಶೈಲಿಯ ಮತ್ತು ಸಾಮಾಜಿಕ ಜವಾಬ್ದಾರಿಯುಳ್ಳ ಪರಿಕರಗಳನ್ನು ಪರಿಶೀಲಿಸಬಹುದು, ಜನರ ಶಾಪಿಂಗ್ ಅನುಭವವನ್ನು ಬಿಯಿಂಗ್ ಹ್ಯೂಮನ್ ಕ್ಲೋಥಿಂಗ್ ವಿಸ್ತರಿಸುತ್ತಿರುವಂತೆ ತಾನು ಇಡುವ ಪ್ರತಿಯೊಂದು ಹೆಜ್ಜೆ ದಯೆ ಮತ್ತು ಸಮಾನತೆಯ ವಿಶ್ವವನ್ನು ನಿರ್ಮಿಸಲು ಹೆಜ್ಜೆಯಿಡುತ್ತಿದೆ ಎಂದು ಅವರು ನುಡಿದರು.