This is the title of the web page

ಸೊಂಟ ದಪ್ಪ ಆಗಿದೆ ಎಂದು ಸರ್ಜರಿ ಮಾಡಿಸಿಕೊಂಡ ನಟಿ ಚೇತನಾ ಸಾವು

ಬೆಂಗಳೂರು, ೧೭- ಸೊಂಟ ದಪ್ಪ ಆಗಿದೆ ಎಂದು ಯಾರೋ ಹೇಳಿದ್ದಕ್ಕೆ ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳಲು ಹೋಗಿ ನಟಿ ಚೇತನಾ ರಾಜ್ ಅವರು ನಿಧನರಾಗಿದ್ದಾರೆ.

ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶದಲ್ಲಿ ನೀರು ತುಂಬಿತು ಎನ್ನಲಾಗಿದ್ದು ವೈದ್ಯರು ಚಿಕಿತ್ಸೆ ನೀಡಲು ಪ್ರಯತ್ನಪಟ್ಟರೂ ಚೇತನಾರನ್ನು ಬದುಕಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ತಂದೆ-ತಾಯಿಗೆ ಹೇಳದೇ ಮೇ 16 ರಂದು ಅವರ ಫ್ಯಾಟ್ ಸರ್ಜರಿ ಮಾಡಲಾಗುತ್ತಿತ್ತು. ಈ ವಿಷಯ ಗೊತ್ತಾಗಿ ಪೋಷಕರು ಆಸ್ಪತ್ರೆಗೆ ಬಂದಿದ್ದರು. ಶಸ್ತ್ರಚಿಕಿತ್ಸೆ ವೇಳೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು ಚೇತನಾ ಸ್ಥಿತಿ ಗಂಭೀರವಾಯಿತು. ಮನೆಯಲ್ಲಿ ತಿಳಿಸದೇ ಚೇತನಾ ಫ್ಯಾಟ್ ಸರ್ಜರಿ ಮಾಡಿಕೊಂಡಿದ್ದಾರೆ. “ಯಾರೋ ಸೊಂಟ ದಪ್ಪ ಅಂತ ಹೇಳಿದರು ಅಂತ ಚೇತನಾ ಈ ಸರ್ಜರಿಗೆ ಒಳಗಾಗಿದ್ದಾರೆ. ನನ್ನ ಮಗಳು ಆರೋಗ್ಯವಾಗಿದ್ದಳು” ಎಂದು ಚೇತನಾ ಅವರ ತಂದೆ ವರದರಾಜ ಹೇಳಿದ್ದಾರೆ.

ಫ್ಯಾಟ್ ತೆಗೆತೀನಿ ಅಂತ ಹೇಳಿ ಈ ರೀತಿ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ದೊಡ್ಡ ನಟಿಯಾಗಬೇಕು ಎಂದು ಮಗಳು ತುಂಬ ಕನಸು ಇಟ್ಟುಕೊಂಡಿದ್ದಳು. ನನ್ನ ಮಗಳ ಜೊತೆ ಸ್ನೇಹಿತರಿದ್ದರು. ಮುಂಜಾಗ್ರತೆ ಕ್ರಮ ಕೈಗೊಳ್ಳದೇ ಈ ರೀತಿ ಮಾಡಲಾಗಿದೆ. ನನ್ನ ಮಗಳಿಗೆ ಯಾವುದೇ ಕಾಯಿಲೆ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

ದಪ್ಪ ಇದ್ದೀಯಾ ಅಂತ ಯಾರೋ ಹೇಳಿದರು ಅಂತಾ ಮಗಳು ಸರ್ಜರಿಗೆ ಒಳಗಾಗಿದ್ದಾಳೆ. ವೈದ್ಯರು ಮನೆಯವರ ಅನುಮತಿ ಇಲ್ಲದೇ ಸರ್ಜರಿ ಮಾಡಿದರು ಎಂದು ಚೇತನಾ ತಂದೆ ವರದರಾಜ ಅವರು ರಾಜಾಜಿ ನಗರದ ಬಳಿ ಇರುವ ಶೆಟ್ಟಿ ಕಾಸ್ಮೆಟಿಕ್ ಕ್ಲಿನಿಕ್ ವಿರುದ್ಧ ಆರೋಪ ಮಾಡಿದ್ದಾರೆ.

ಆಸ್ಪತ್ರೆಯಲ್ಲಿ ಅಗತ್ಯ ಸಲಕರಣೆಗಳಿಲ್ಲ, ಪೋಷಕರ ಒಪ್ಪಿಗೆ ಇಲ್ಲದೇ ಫ್ಯಾಟ್ ಸರ್ಜರಿ ಮಾಡಿದರು ಎಂದು ತಂದೆ ವರದರಾಜ್ ಆರೋಪ ಮಾಡಿದ್ದಾರೆ. ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ವೈದ್ಯರ ವಿರುದ್ಧ ಪೊಲೀಸರಿಗೆ ದೂರು ನೀಡಲು ಪೋಷಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ

ಗೀತಾ ಮತ್ತು ದೊರೆಸಾನಿ ಧಾರಾವಾಹಿಯಲ್ಲಿ ಚೇತನಾ ರಾಜ್ ನಟಿಸಿದ್ದರು. ಇನ್ನೂ ಬಿಡುಗಡೆಯಾಗದ ಆವಾಮಯಾಮಿ ಚಲನಚಿತ್ರದಲ್ಲಿಯೂ ಚೇತನಾ ನಟಿಸಿದ್ದಾರೆ.

You might also like
Leave a comment