Live Stream

November 2022
W T F S S M T
 1
2345678
9101112131415
16171819202122
23242526272829
30  

| Latest Version 8.2.9 |

Crime News

ಕಲಬೆರಕೆ‌ ತುಪ್ಪ ಮಾರಾಟ : ಓರ್ವನ ಬಂಧನ


ವಿಜಯಪುರ: ಕಲಬೆರಕೆ‌ ತುಪ್ಪ ಮಾರಾಟ ಮಾಡುತ್ತಿದ್ದ ಮಳಿಗೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 30 ಕೆ.ಜಿ ತುಪ್ಪ ವಶಕ್ಕೆ ಪಡೆದು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಘಟನೆ ನಗರದ ಸಾಯಿ ಪಾರ್ಕ್​ನ ಬಳಿಯ ಶ್ರೀ ಬಾಲಾಜಿ ಹಾಲಿನ ಡೈರಿ ಎಂಬ ಮಳಿಗೆ ಮೇಲೆ ಈ ದಾಳಿ ನಡೆದಿದೆ. ಈ ಮಳಿಗೆಯಲ್ಲಿ ಕಲಬೆರಕೆ ತುಪ್ಪ ಮಾರಾಟ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಕಲಬೆರಕೆ ತುಪ್ಪ ಮಾರಾಟ ಮಾಡುತ್ತಿರುವುದು ಖಚಿತವಾಗುತ್ತಿದ್ದಂತೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದ್ದಾರೆ‌.

ನಕಲಿ ತುಪ್ಪದ ಬಾಟಲ್, ಸ್ಟಿಕರ್ ಸೇರಿದಂತೆ ಪ್ಯಾಕಿಂಗ್ ಸಾಮಾಗ್ರಿ ಹಾಗೂ ಬಿಲ್​ ಪುಸ್ತಕಗಳು ಲಭ್ಯವಾಗಿವೆ. ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದಾಗ ಅಂಗಡಿ ಮಾಲೀಕ ರವಿ ನಿಂಗನಗೌಡ ಬಿರಾದರ ತಪ್ಪಿಸಿಕೊಳ್ಳಲು ಯತ್ನಿಸಿದನಾದರೂ ಅಧಿಕಾರಿಗಳು ಕೂಡಲೇ ವಶಕ್ಕೆ ಪಡೆದುಕೊಂಡರು ಎಂದು ಹೇಳಲಾಗಿದೆ.


A B Dharwadkar
the authorA B Dharwadkar

Leave a Reply