This is the title of the web page

ಎಐಎಂಐಎಂ ಪಕ್ಷದ ಧ್ವಜ ತೆರವು

ವಿಜಯಪುರ, 27- ಮತಗಟ್ಟೆ ಬಳಿ ಇದ್ದ ಎಐಎಂಐಎಂ ಪಕ್ಷದ ಧ್ವಜಗಳನ್ನು ಚುನಾವಣಾಧಿಕಾರಿಗಳು ತೆರವುಗೊಳಿಸಿದ ಘಟನೆ ನಡೆದಿದೆ.

ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣ ಪಂಚಾಯತಿ ಚುನಾವಣೆ ವೇಳೆ ಈ ಪ್ರಕರಣ ನಡೆದಿದ್ದು ಪಟ್ಟಣದ ಆಜಾದ ನಗರ ಬಳಿಯ 8, 9 ಹಾಗೂ 10 ವಾರ್ಡಗಳ ಮತಗಟ್ಟೆ ಬಳಿಯಲ್ಲಿ ಎಐಎಂಐಎಂ ಪಕ್ಷದ ಧ್ವಜಗಳ ಹಾರಾಟ ಕಂಡುಬಂದ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಠಿಯಾಗಿತ್ತು.

ಚುನಾವಣಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗಮಿಸಿ ಆ ಪಕ್ಷದ ಧ್ವಜಗಳನ್ನು ತೆರವುಗೊಳಿಸಿ ಪರಿಸ್ಥಿತಿ ಶಾಂತಗೊಳಿಸಿದರು. ಪಟ್ಟಣದ ಐದು ವಾರ್ಡಗಳಲ್ಲಿ ಎಐಎಂಐಎಂ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಇಲ್ಲಿ ಈ ಬಾರಿ ಬಿಜೆಪಿ ತಮ್ಮ ಅಭ್ಯರ್ಥಿಗಳನ್ನು ಹಾಕಿಲ್ಲ. ಈ ಐದು ವಾರ್ಡಗಳಲ್ಲಿ ಕಾಂಗ್ರೆಸ್ ಹಾಗೂ ಎಐಎಂಐಎಂ ಪಕ್ಷಗಳ ನಡುವೆ ನೇರ ಸ್ಪರ್ಧೆ ಇದೆ.

You might also like
Leave a comment