This is the title of the web page

ಭಾರತದಲ್ಲಿ ಆತ್ಮಾಹುತಿ ದಾಳಿ ನಡೆಸುವುದಾಗಿ ಅಲ್ ಖೈದಾ ಬೆದರಿಕೆ

ಹೊಸದಿಲ್ಲಿ, ೮- ಪ್ರವಾದಿ ಮೊಹಮ್ಮದ ಅವರನ್ನು ನಿಂದಿಸಿದವರಿಗೆ ಕ್ಷಮೆಯಿಲ್ಲ. ಕೇಸರಿ ಭಯೋತ್ಪಾದಕರು ತಮ್ಮ ಅಂತ್ಯಕ್ಕಾಗಿ ಮುಂಬೈ, ದೆಹಲಿ, ಗುಜರಾತ, ಉತ್ತರಪ್ರದೇಶದಲ್ಲಿ ಕಾಯಬೇಕೆಂದು ಅಲ್ ಖೈದಾ ಬೆದರಿಕೆಯೊಡ್ಡಿದೆ.

ಈ ಕುರಿತು ಜೂನ 6 ರಂದು ಬೆದರಿಕೆ ಪತ್ರವೊಂದನ್ನು ಬಿಡುಗಡೆ ಮಾಡಿದ್ದು ಪ್ರವಾದಿಗಳ ಘನತೆಗಾಗಿ ಹೋರಾಡಲು ದೆಹಲಿ, ಮುಂಬೈ, ಗುಜರಾತ್ ಹಾಗೂ ಉತ್ತರಪ್ರದೇಶದಲ್ಲಿ ಆತ್ಮಾಹುತಿ ದಾಳಿ ನಡೆಸುವುದಾಗಿ ತಿಳಿಸಿದೆ. ಅಲ್ಲದೇ ಹಿಂದೂ ಪರ ಹೋರಾಟಗಾರರನ್ನು ಕೇಸರಿ ಭಯೋತ್ಪಾದಕರು ಎಂದು ಅದು ಹೇಳಿದೆ.

“ಮಾನವೀಯತೆಯ ಹೆಮ್ಮೆಯ ಪ್ರವಾದಿ ಮುಹಮ್ಮದ ಅವರನ್ನು ನಿಂದಿಸುವವರಿಗೆ ಯಾವುದೇ ಕ್ಷಮಾದಾನ ಇರುವುದಿಲ್ಲ. ಯಾವುದೇ ಶಾಂತಿ ಮತ್ತು ಭದ್ರತೆ ಅವರನ್ನು ಉಳಿಸುವುದಿಲ್ಲ, ಈ ವಿಚಾರ ಮುಕ್ತಾಯಗೊಳ್ಳುವುದಿಲ್ಲ. ಮನೆ ಅಥವಾ ಸೈನ್ಯದ ಕೋಟೆಯಲ್ಲಿಯೇ ಅಡಗಿದರೂ ಅವರನ್ನು ಸುಮ್ಮನೆ ಬಿಡುವುದಿಲ್ಲ. ನಮ್ಮ ಪ್ರೀತಿಯ ಪ್ರವಾದಿಯವರನ್ನು ಅವಮಾನಿಸಿದವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳದಿದ್ದರೆ ನಮ್ಮ ತಾಯಿಯಂದಿರು ನಮ್ಮನ್ನು ಕಳೆದುಕೊಳ್ಳಲಿ ಎಂದು ಎಚ್ಚರಿಸಲಾಗಿದೆ.

ಪ್ರವಾದಿಯವರನ್ನು ಅವಮಾನಿಸಿದವರ ಹತ್ಯೆ ಮಾಡುತ್ತೇವೆ. ಪ್ರವಾದಿಗಳ ಅವಮಾನಿಸಿದವರ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ನಮ್ಮ ಹಾಗೂ ನಮ್ಮ ಮಕ್ಕಳದ ದೇಹದ ಮೇಲೆ ಸ್ಫೋಟಗಳನ್ನು ಹಾಕುತ್ತೇವೆಂದು ಅದು ತಿಳಿಸಿದೆ.

ಈ ನಡುವೆ ನೂಪುರ ಶರ್ಮಾ ಅವರಿಗೂ ಬೆದರಿಕೆಯೊಡ್ಡಿರುವ ಉಗ್ರ ಸಂಘಟನೆಯೊಂದು, ನೂಪುರ್ ಶರ್ಮಾ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು, ಇಡೀ ವಿಶ್ವದ ಮುಂದ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ, ಪ್ರವಾದಿಗಳನ್ನು ಅವಹೇಳನ ಮಾಡಿದವರಿಗೆ ಏನು ಮಾಡುಲಾಗುತ್ತದೆಯೋ ಅದನ್ನೇ ನೂಪುರ ಅವರಿಗೆ ಮಾಡಲಾಗುತ್ತದೆ ಎಂದು ಹೇಳಿದೆ.

ಈ ಕುರಿತು ಟೆಲಿಗ್ರಾಮ್ ಆ್ಯಪ್ ನಲ್ಲಿ ಮುಜಾಹಿದೀನ್ ಫಜ್ವಾತುಲ್ ಹಿಂದ ಉಗ್ರ ಸಂಘಟನೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಇದೇ ವೇಳೆ ಬಿಜೆಪಿ ನಾಯಕರು ನಿರಂತರವಾಗಿ ಮುಸ್ಲಿಂ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಆರ್’ಎಸ್ಎಸ್, ರಾಮಸೇನೆ, ಬಜರಂಗದಳ, ಶಿವಸೇನೆಗಳು ಇಸ್ಲಾಂ ಹಾಗೂ ಮುಸ್ಲಿಮರ ವಿರುದ್ಧ ನಿರಂತರವಾಗಿ ದ್ವೇಷದ ಭಾಷಣ ಮಾಡುತ್ತಿದೆ ಎಂದು ಅದು ಕಿಡಿಕಾರಿದೆ.

ಮುಜಾಹಿದೀನ್ ಫಜ್ವಾತುಲ್ ಹಿಂದ್ ಸಂಘಟನೆ ಕಾಶ್ಮೀರದಲ್ಲಿ ಸಕ್ರಿಯವಾಗಿದೆ. ಕಳೆದ ಜನವರಿ ತಿಂಗಳಿನಲ್ಲಿ ದೆಹಲಿಯ ಗಾಜಿಪುರ್ ಹೂವಿನ ಮಾರುಕಟ್ಟೆ ಸ್ಫೋಟ ಪ್ರಕರಣದಲ್ಲಿ ಇದರ ಪಾತ್ರ ಇದೆ ಎಂದು ಹೇಳಲಾಗಿತ್ತು.

You might also like
Leave a comment