Please assign a menu to the primary menu location under menu

State

ನಾಳೆಯಿಂದ ಪೇ-ಸಿಎಂ ಪೋಸ್ಟರ್ ನಾವೇ ಅಂಟಿಸುತ್ತೇವೆ : ಸಿದ್ದರಾಮಯ್ಯ 

siddaramaiah

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿರುವ ಕಾಂಗ್ರೆಸ್, ಬೆಂಗಳೂರಿನಲ್ಲಿ ಗೋಡೆಗಳ ಮೇಲೆ ಪೇ-ಸಿಎಂ ಪೋಸ್ಟರ್ ಆಂದೋಲನ ಆರಂಭಿಸಿದ್ದು ನಾಳೆಯಿಂದ ಕಾಂಗ್ರೆಸ್  ಶಾಸಕರೆಲ್ಲರೂ ಈ ಆಂದೋಲನದಲ್ಲಿ ಭಾಗಿಯಾಗಲಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ  ಹೇಳಿದ್ದಾರೆ.

ಪೇಸಿಎಂ ಪೋಸ್ಟರ್ ಅಂಟಿಸಿದ್ದ ಕಾಂಗ್ರೆಸ್ ಕಚೇರಿ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಬಿಜೆಪಿಯವರೂ ನಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ನಮ್ಮ ವಿರುದ್ಧ ಅವರೂ ಕೂಡ ಏನೇನೋ ಪೋಸ್ಟರ್ ಅಂಟಿಸಿದ್ದಾರೆ. ಪೊಲೀಸರಿಗೆ ಬಿಜೆಪಿಯವರುನ್ನು ಅವರನ್ಯಾಕೆ ಬಂಧಿಸಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಪೇ-ಸಿಎಂ ಆಂದೋಲನ ಯಾರೋ ಇಬ್ಬರು ಮಾಡಿದ್ದಲ್ಲ ಇಡೀ ಪಕ್ಷದ ವತಿಯಿಂದ ಮಾಡಿದ್ದೇವೆ. ತಕ್ಷಣ ನಮ್ಮ ಸಿಬ್ಬಂದಿ ಮತ್ತು ಕಾರ್ಯಕರ್ತರನ್ನು ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ನಾಳೆ ಕಾಂಗ್ರೆಸ್ ನ ಎಲ್ಲಾ ಶಾಸಕರು ಪೇ-ಸಿಎಂ ಪೋಸ್ಟರ್ ಅಂಟಿಸಲಿದ್ದೇವೆ ಎಂದು ಎಚ್ಚರಿಸಿದರು.


Samadarshi News

Leave a Reply