This is the title of the web page

ಬೆಳಗಾವಿಯ ಮತ್ತೊಬ್ಬ ಗುತ್ತಿಗೆದಾರನ ಆತ್ಮಹತ್ಯೆ?

ಬಾಳೆಹೊನ್ನೂರ, ೨೮- ಬೆಳಗಾವಿ ಜಿಲ್ಲೆಯ ಸಾರ್ವಜನಿಕ ಕಾಮಗಾರಿ ನಡೆಸುವ ಗುತ್ತಿಗೆದಾರರಾದ  47 ವರ್ಷದ ಬಸವರಾಜ ಎಂಬವರ ಶವವು ಹೊಟೇಲ್ ಕೋಣೆಯೊಂದರ ಫ್ಯಾನ್ ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡರಬಹುದು ಎನ್ನಲಾಗುತ್ತಿದೆ.

ನಾಲ್ಕು ದಿನಗಳ ಹಿಂದೆ ರೂಮ್ ಬಾಡಿಗೆ ಪಡೆದಿದ್ದ ಬಸವರಾಜ ನಿನ್ನೆ ಬುಧವಾರ ಮುಂಜಾನೆ ಲಾಡ್ಜ್ ಸಿಬ್ಬಂದಿಗೆ ಕಾಣಿಸಿಕೊಂಡಿದ್ದರು. ಅವರ ಕೋಣೆಯಿಂದ ಯಾವುದೇ ಧ್ವನಿ ಬರಲಿಲ್ಲ. ಕದ ತಟ್ಟಿದಾಗ ಬಾಗಿಲು ತೆರೆಯಲಿಲ್ಲ.  ಮಧ್ಯಾಹ್ನ ವಾದರೂ ಅವರು ಹೊರಗೆ ಬಾರದೇ ಇದ್ದುದರಿಂದ ರೂಮ್ ಸಹಾಯಕರು ಮ್ಯಾನೇಜಮೆಂಟಗೆ ತಿಳಿಸಿದ್ದಾರೆ. ಅವರು ಪೊಲೀಸರಿಗೆ ಮಾಹಿತಿ ನೀಡಿ ರೂಮ್ ಬಾಗಿಲು ತೆರೆದು ನೋಡಿದಾಗ ಅವರು ಫ್ಯಾನ್ ಗೆ ನೇಣು ಹಾಕಿದ ಸ್ಥಿತಿಯಲ್ಲಿ ಕಂಡು ಬಂದಿದ್ದರು.

ಬೆಳಗಾವಿಯಿಂದ ಕುಟುಂಬಸ್ಥರು ಬಂದ ಬಳಿಕ ಆತ್ಮಹತ್ಯೆ ಕುರಿತು ತಿಳಿಯಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಕುಟುಂಬಸ್ಥರು ಬಂದ ಬಳಿಕ ದೂರು ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

You might also like
Leave a comment