Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

State News

ಕಲುಷಿತ ನೀರಿಗೆ ಮತ್ತೊಬ್ಬರು ಬಲಿ 


ರಾಮದುರ್ಗ: ಕಲುಷಿತ ನೀರು ಕುಡಿದು ಕಳೆದ 4 ದಿನಗಳಲ್ಲಿ ಗ್ರಾಮದ 90ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡ ಘಟನೆಯ ನಡುವೆ ಇದೀಗ ಮತ್ತೊಬ್ಬರು ಬಲಿಯಾಗಿದ್ದಾರೆ.

ಸರಸ್ವತಿ ನಿಂಗಪ್ಪ ಹಾವಳ್ಳಿ (70) ಎಂಬ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ತಾಲೂಕು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಈ ಮೂಲಕ ಮುದೇನೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ. ನಿನ್ನೆ 70 ವರ್ಷದ ಶಿವಪ್ಪ ಬೆಳ್ಳೇರಿ ಎಂಬುವವರು ಮೃತಪಟ್ಟಿದ್ದರು.

ಕಲುಷಿತ ನೀರು ಸೇವಿಸಿ ಇದುವರೆಗೂ 94 ಜನರು ಅಸ್ವಸ್ಥರಾಗಿದ್ದು, ಅಸ್ವಸ್ಥರನ್ನು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ.


A B Dharwadkar
the authorA B Dharwadkar

Leave a Reply