Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

Local News

ಕಲುಷಿತ ನೀರು ಸೇವಿಸಿ ಮತ್ತೊಬ್ಬರ ಸಾವು


ಬೆಳಗಾವಿ: ರಾಮದುರ್ಗ ತಾಲೂಕಿನ ಮುದೇನೂರಿನಲ್ಲಿ ಕಲುಷಿತ ನೀರು ಸೇವಿಸಿ ಜನರು ಅಸ್ವಸ್ಥ ಕೇಸ್​ಗೆ ಸಂಬಂಧಿಸಿದಂತೆ ಚಿಕಿತ್ಸೆ ಫಲಿಸದೆ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ.

ವಾಂತಿ ಭೇದಿ ತೀವ್ರವಾಗಿ ಕಿಡ್ನಿ ವೈಫಲ್ಯವಾಗಿದ್ದು, ಚಿಕಿತ್ಸೆ ಫಲಿಸದೆ ಮುದೇನೂರು ಗ್ರಾಮದ ವಿಠ್ಠಲ ಗುಡಿಹಿಂದ (45) ಮೃತಪಟ್ಟಿದ್ದಾರೆ. ಪ್ರಕರಣವಾದಾಗಿಂದ ಬಾಗಲಕೋಟದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಠ್ಠಲ ಎಂಬವ ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಆಂಬುಲೆನ್ಸ್​ನಲ್ಲಿ ಮೃತಪಟ್ಟಿದ್ದಾರೆ.

ಸದ್ಯ ಕಲುಷಿತ ನೀರು ಸೇವಿಸಿ ಮೃತಪಟ್ಟವರ ಸಂಖ್ಯೆಯ 3ಕ್ಕೆ ಏರಿದೆ. ಗ್ರಾಮದ 186 ಮಂದಿ ಅಸ್ವಸ್ಥರಾಗಿದ್ದರು. ಈ ಪೈಕಿ 12 ಬಾಲಕರು, 8 ಬಾಲಕಿಯರು ಸೇರಿದ್ದರು. ಆರೋಗ್ಯ ಸ್ಥಿತಿ ಗಂಭೀರವಾಗಿರುವ 94 ಮಂದಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.


A B Dharwadkar
the authorA B Dharwadkar

Leave a Reply