This is the title of the web page

ಕೃಷಿ ಸಾಲಕ್ಕೆ ಮತ್ತೊಂದು ರೈತ ಕುಟುಂಬ ಬಲಿ

ಹಾವೇರಿ, 15- ಕೃಷಿಗೆ ಮಾಡಿದ ಸಾಲ ಮತ್ತೊಂದು ಕುಟುಂಬವು ಮತ್ತೊಂದು ರೈತ ಕುಟುಂಬವನ್ನು ಬಲಿ ತೆಗೆದುಕೊಂಡ ಘಟನೆ ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ಸೇರಿಸಲಾಗಿದ್ದ ಪತ್ನಿ ಅಸುನೀಗಿದ ವಿಷಯ ತಿಳಿದು ಪತಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾರೆ.

56 ವರುಷದ ರೈತ ಶಂಕ್ರಪ್ಪ ಅಗಡಿ ಎಂಬವರು ಎರಡು ವರ್ಷದ ಹಿಂದೆ ಒಂದೂವರೆ ಎಕರೆ ಜಮೀನು ಮಾರಾಟ ಮಾಡಿದ್ದರು. ಈ ವರ್ಷ ಲಾವಣಿ ರೂಪದಲ್ಲಿ ಬೇರೆಯವರ 8 ಎಕರೆ ಜಮೀನು ನಡೆಸುತ್ತಿದ್ದರು ಎನ್ನಲಾಗಿದ್ದು ಮೂವತ್ತೈದು ಗುಂಟೆ ಮಾತ್ರ ಸ್ವಂತ ಜಮೀನು ಹೊಂದಿದ್ದರು. ಬ್ಯಾಂಕ್ ಮತ್ತು ಕೈಸಾಲ  ಸಾಲ ಪಡೆದಿದ್ದ ಅವರು, ಲಾವಣಿ ರೂಪದಲ್ಲಿ ಪಡೆದಿದ್ದ ಜಮೀನಿನಲ್ಲಿ ಹತ್ತಿ ಮತ್ತು ಮೆಕ್ಕೆಜೋಳದ ಬೆಳೆ ಬೆಳೆದಿದ್ದರು. ಆದರೆ ಬೆಳೆ ಹಾಳಾಗಿದ್ದರಿಂದ ಈ ಕುಟುಂಬ ತೀವ್ರ ಸಂಕಷ್ಟಕ್ಕೀಡಾಗಿತ್ತು.

ಆರ್ಥಿಕವಾಗಿ ತುಂಬಾ ಜರ್ಜರಿತವಾಗಿದ್ದ ಕುಟುಂಬದ ನಿರ್ವಹಣೆ ಅಸಾಧ್ಯವೆಂದು ಶಂಕ್ರಪ್ಪ ಅವರ ಪತ್ನಿ 50 ವರುಷದ ವಾಣಿಶ್ರೀ ಅವರು ತನ್ನ 21 ವರುಷದ ಮಗಳು ಕೀರ್ತಿ ಜೊತೆಗೆ ಎರಡು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ನಿನ್ನೆ ರಾತ್ರಿ ಚಿಕಿತ್ಸೆ ಫಲಿಸದೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ವಾಣಿಶ್ರೀ ಮೃತಪಟ್ಟಿದ್ದಾರೆ.

ಪತ್ನಿಯ ಸಾವಿನ ಸುದ್ದಿ ತಿಳಿದು ತಮ್ಮ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಶಂಕ್ರಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಗಳು ಕೀರ್ತಿ ಸಾವು ಬದುಕಿನ ಜೊತೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾಳೆ.

You might also like
Leave a comment