Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

Crime NewsEntertainment News

ಕಿರುತೆರೆ ನಟಿ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್; ಆರೋಪಿ ಬಂಧನದ ಬಳಿಕ ಮಾಹಿತಿ ಬಹಿರಂಗ


ಬೆಂಗಳೂರು, ೨೧- ಕಿರುತೆರೆ ನಟಿ ವೈಶಾಲಿ ಠಕ್ಕರ್ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ವೈಶಾಲಿಯವರ ಮಾಜಿ ಪ್ರಿಯಕರ ರಾಹುಲ್ ನವಲಾನಿಯನ್ನು ಪೊಲೀಸರು ಬಂಧಿಸಿದ ವೇಳೆ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ತನಗೆ ವಿವಾಹವಾಗಿದ್ದರೂ ಸಹ ರಾಹುಲ್ ನಟಿಗೆ ಇನ್ನಿಲ್ಲದಂತೆ ಕಿರುಕುಳ ನೀಡುತ್ತಿದ್ದು, ಇದರಿಂದ ರೋಸಿ ಹೋದ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.

ವೈಶಾಲಿಯವರ ವಿವಾಹ ಇದೇ ಅಕ್ಟೋಬರ್ 20ರಂದು ಇಂದೋರ್ ನಲ್ಲಿ ಆಯೋಜಿಸಲಾಗಿತ್ತಾದರೂ ಇದನ್ನು ತಪ್ಪಿಸಬೇಕೆಂಬ ಕಾರಣಕ್ಕೆ ರಾಹುಲ್ ಈ ಹಿಂದೆ ವೈಶಾಲಿ ಜೊತೆ ತಾನು ಆತ್ಮೀಯವಾಗಿದ್ದ ಫೋಟೋವನ್ನು ಆಕೆಯ ಭಾವಿಪತಿ ಮಿತೇಶಗೆ ಕಳುಹಿಸಿದ್ದ ಎನ್ನಲಾಗಿದೆ. ರಾಹುಲ್ ಮತ್ತು ವೈಶಾಲಿ ನೆರೆಹೊರೆಯರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಆ ಬಳಿಕ ಅವರ ಸಂಬಂಧ ಕಡಿದು ಹೋಗಿತ್ತು ಎನ್ನಲಾಗಿದೆ.

ರಾಹುಲ್, ದಿಶಾ ಎಂಬಾಕೆಯನ್ನು ವಿವಾಹವಾಗಿದ್ದು, ಈತನಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಸಂಬಂಧ ಕಡಿದು ಹೋಗಿದ್ದರೂ ಸಹ ರಾಹುಲ್ ವೈಶಾಲಿಯ ಬೆನ್ನು ಬಿಟ್ಟಿರಲಿಲ್ಲ. ಆಘಾತಕಾರಿ ಸಂಗತಿ ಎಂದರೆ ದಿಶಾ ಸಹ ಪತಿಯ ಕೃತ್ಯಕ್ಕೆ ಸಹಕಾರ ನೀಡುತ್ತಿದ್ದಳು ಎಂದು ಮೂಲಗಳು ಹೇಳಿವೆ. ಇದರಿಂದ ಬೇಸತ್ತ ವೈಶಾಲಿ ಆತ್ಮಹತ್ಯೆಗೆ ಶರಣಾಗಿದ್ದು, ಇದೀಗ ರಾಹುಲ್ ನನ್ನು ಬಂಧಿಸಿರುವ ಪೊಲೀಸರು ದಿಶಾಳ ಪತ್ತೆಗೆ ಬಲೆ ಬೀಸಿದ್ದಾರೆ.


Leave a Reply