This is the title of the web page

ಸಾಲಬಾಧೆಗೆ ಬೆಳಗಾವಿಯಲ್ಲಿ ಮತ್ತೊಬ್ಬ ನೇಕಾರ ಬಲಿ 

 

ಬೆಳಗಾವಿ, ೧೯- ಸಾಲಬಾಧೆಗೆ ನೇಕಾರರ ಸರಣಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಮುಂದುವರಿದಿದೆ. ಸಾಲಬಾಧೆಯಿಂದ ಮನೆಮಾರು ಕಳೆದುಕೊಂಡಿದ್ದ ಕಲ್ಲಪ್ಪ ಸೊಂಟಕ್ಕಿ ಇಂದು ವಡಗಾವಿಯ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯ ನೇಕಾರರಿದ್ದು ಉತ್ತಮ ದಿನಗೂಲಿ ದೊರೆಯದೇ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಮುಂತಾದವಕ್ಕೆ ಸಾಲ ಮಾಡಿ ಅದನ್ನು ತೀರಿಸಲಾಗದೇ ಆತ್ಮಹತ್ಯೆಗೆ ಶರಣರಾಗುತ್ತಿದ್ದಾರೆ ಎಂದು ನೇಕಾರ ಕಾರ್ಮಿಕ ಬಳಗದ ಅಧ್ಯಕ್ಷರಾದ ಸರಳಾ ಸಾತಪುತೆ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ನೇಕಾರರ ಸಮಸ್ಯೆ ಉಳಿದ ಪ್ರದೇಶಗಳಿಗಿಂತ ಹೆಚ್ಚಾಗುತ್ತಿರುವುದಕ್ಕೆ ಸ್ಥಳೀಯ ಸಾಮಾಜಿಕ, ಆರ್ಥಿಕ ಕಾರಣಗಳನ್ನು ಶೋಧಿಸುವುದು ಅತ್ಯವಶ್ಯ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಮೀಕ್ಷೆ ನಡೆಸಿ ನೇಕಾರರ ಆರ್ಥಿಕ ಸ್ಥಿತಿ ಉತ್ತಮಗೊಳ್ಳುವ ಹಾಗೂ ಆತ್ಮಹತ್ಯೆ ಪ್ರಕರಣಗಳ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

You might also like
Leave a comment