ಕಾರವಾರ: ಇಲ್ಲಿನ ಐಎನ್ಎಸ್ ಕದಂಬ ನೌಕಾನೆಲೆಯ ಸೂಕ್ಷ್ಮ ಚಿತ್ರ, ವಿವಿಧ ಮಾಹಿತಿಗಳನ್ನು ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದ ಅಂಕೋಲಾದ ಅಕ್ಷಯ ನಾಯ್ಕ, ಕಾರವಾರದ ಮುದಗಾದ ವೇತನ ತಾಂಡೇಲ್ ಎನ್ನುವವರನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮಂಗಳವಾರ ವಶಕ್ಕೆ ಪಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಎನ್ಐಎ ಎರಡು ತಂಡ ಮಾಡಿ ಮುದಗಾ ಮತ್ತು ಅಂಕೋಲಾದಲ್ಲಿ ಏಕಕಾಲಕ್ಕೆ ಯುವಕರನ್ನು ವಶಕ್ಕೆ ಪಡೆದಿದೆ. ಇವರಿಬ್ಬರಿಗೂ ಸೋಶಿಯಲ್ ಮೀಡಿಯಾದಲ್ಲಿ ಯುವತಿಯರ ಹೆಸರಿನಲ್ಲಿ ಪರಿಚಯ ಮಾಡಿಕೊಂಡು ಕದಂಬ ನೌಕಾನೆಲೆಯ ಚಿತ್ರಗಳನ್ನು ಸಂಗ್ರಹಿಸಿದ್ದರು. ಅದಕ್ಕಾಗಿ ಅವರಿಗೆ ಹಣವನ್ನೂ ಪಾವತಿಸಿದ್ದರು ಎನ್ನುವ ಬಗ್ಗೆ ವಿಚಾರಣೆ ಮೇಳೆ ಮಾಹಿತಿ ಲಭ್ಯವಾಗಿದೆ.
ಕಳೆದ 2023ರಲ್ಲಿ ನೌಕಾನೆಲೆಯ ಚಿತ್ರಗಳು ಪಾಕಿಸ್ತಾನಕ್ಕೆ ರವಾನೆ ಮಾಡಲಾಗಿತ್ತು. ಇದನ್ನು ಆಧರಿಸಿ ಎನ್ಐಎ ಹೈದರಾಬಾದ್ ತಂಡ ನೌಕಾನೆಲೆಯ ಕೆಲ ಅಧಿಕಾರಿ, ಸಿಬ್ಬಂದಿಯನ್ನು ವಶಕ್ಕೆ ಪಡೆದಿತ್ತು. ಅದೇ ಪ್ರಕರಣ ಮುಂದಿನ ಭಾಗವಾಗಿ, ನೌಕಾನೆಲೆಯಲ್ಲಿ ಹೊರಗುತ್ತಿಗೆ ನೌಕರರಾಗಿದ್ದ ವೇತನ್ ಮತ್ತು ಅಕ್ಷಯ ಎನ್ನುವವರನದನು ವಶಕ್ಕೆ ಪಡೆದಿದೆ ಎಂದು ಹೇಳಲಾಗುದೆ.
2024ರ ಆ.28 ರಂದು ಈ ಆರೋಪಿಗಳು ಸೇರಿ ಮೂವರನ್ನು ಎನ್ಐಎ ವಿಚಾರಣೆ ನಡೆಸಿ, ನೋಟಿಸ್ ನೀಡಿತ್ತು. ಈಗ ಆರು ಜನ ಎನ್ಐಎ ಅಧಿಕಾರಿಗಳನ್ನು ತಂಡವು ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ಬಗ್ಗರ ಮಾಹಿತಿ ಸಂಗ್ರಹಿಸಿದ ಬಳಿಕ ಹೆಚ್ಚಿನ ವಿಚಾರಣೆಗಾಗಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.