This is the title of the web page

ಹಣ ಹಂಚುತ್ತಿದ್ದ ಬಿಜೆಪಿ ಕಾರ್ಯಕರ್ತರ ಬಂಧನ

ವಿಜಯಪುರ, 27- ಮತದಾರರಿಗೆ ಹಣ ಹಂಚುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್ ಕಾರ್ಯಕರ್ತರು ಹಿಡಿದು ಹಣ ಸಮೇತ ಚುನಾವಣಾಧಿಕಾರಿಗೆ ಒಪ್ಪಿಸಿದ್ದಾರೆ.

ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣ ಪಂಚಾಯಿತಿ ಚುನಾವಣೆಗಾಗಿ ರವಿವಾರ ರಾತ್ರಿ ಸುಮಾರು 11 ಗಂಟೆಗೆ ಎರಡು ಬೈಕ್ ನಲ್ಲಿ ಬಂದ ನಾಲ್ಕು ಜನರು ಮತದಾರರಿಗೆ ಹಣ ಹಂಚುತಿದ್ದರು. ಈ ವಿಷಯ ಗೊತ್ತಾಗಿ ಕಾಂಗ್ರೆಸ್ ಕಾರ್ಯಕರ್ತರು ಸ್ಥಳಕ್ಕೆ ತೆರಳಿ ಮೂವರನ್ನು ಹಿಡಿದರಾದರೂ ಓರ್ವ ಪರಾರಿಯಾದನು.

ಕೈಯಲ್ಲಿ ನೋಟಿನ ಕಂತೆ ಹಿಡಿದಿರುವ ಯುವಕರ ಪೋಟೊ ವೈರಲ್ ಆಗಿದೆ. ಇವರು ಗ್ರಾಮದವರೇ ಅಲ್ಲದ ಯುವಕರು ಎನ್ನಲಾಗಿದೆ. ಅವರ ಬೈಕ್ ನಲ್ಲಿ ಬಿಜೆಪಿಯ ಧ್ವಜ ಹಾಗೂ ಮಾದರಿ ಮತ‌ ಪತ್ರ ಪತ್ತೆಯಾಗಿವೆ.

ಗ್ರಾಮದಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ರಾತ್ರಿ 1 ಘಂಟೆಗೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಶಿವಾನಂದ ಪಾಟೀಲ ಅವರು ತಹಸೀಲ್ದಾರ ಎಂ.ಎನ್. ಬಳಗಾರ ಮತ್ತು ಪಿಎಸ್ಐ ಅವರನ್ನು ತರಾಟೆಗೆ ತೆಗೆದುಕೊಂಡರು.

ಆರೋಪಿಗಳನ್ನು ಪರಿಶೀಲಿಸದೇ ಪಿಎಸ್ಐ ಕರ್ತವ್ಯ ಲೋಪವೆಸಗಿದ್ದಾರೆ‌ ಎಂದು ವಾಗ್ದಾಳಿ ನಡೆಸಿದರು. ಮೂವರು ವ್ಯಕ್ತಿಗಳು ಸೇರಿದಂತೆ 2 ಬೈಕ್ ವಶಕ್ಕೆ ಪಡೆಯಲಾಗಿದೆ.

You might also like
Leave a comment