This is the title of the web page

ಸರಕಾರಿ ಗೋದಾಮಿನಿಂದ ರಸಗೊಬ್ಬರ ಕದ್ದ ಕಳ್ಳರ ಬಂಧನ

 

ಬೆಳಗಾವಿ, 3- ಸಮೀಪದ ದೇಸೂರ ರೈಲ್ವೆ ಸ್ಟೇಶನ್ “ಗೂಡ್ಸ್ ಶೆಡ್” ನ ಗೋದಾಮಿನಿಂದ ರಸಗೊಬ್ಬರ ಚೀಲ ಕಳವು ಮಾಡಿದ್ದ ಐವರನ್ನು ಬೆಳಗಾವಿ ಪೊಲೀಸರು ಬಂಧಿಸಿ ಸುಮಾರು 26 ಲಕ್ಷ ರೂಪಾಯಿ ಮೌಲ್ಯದ 810 ಡಿಎಪಿ ರಸಗೊಬ್ಬರ ಚೀಲಗಳನ್ನು ಹಾಗೂ 2 ಟ್ರಕ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಳಗಾವಿ ತಾಲೂಕು ಹಾಲಗಿಮರಡಿಯ ನಾಗರಾಜ ಈರಣ್ಣ ಪಟಾತ (21), ಖಾನಾಪುರ ತಾಲೂಕಿನ ಲಕ್ಕೇಬೈಲ್ ಗ್ರಾಮದ ಪಂಡಿತ ಕಲ್ಲಪ್ಪ ಸನದಿ (37), ಬೆಳಗಾವಿ ತಾಲೂಕಿನ ಹೊಸ ವಂಟಮುರಿ ಗ್ರಾಮದ ವಾಸೀಮ ಇಸ್ಮಾಯಿಲ್ ಮಕಾನದಾರ (23), ಖಾನಾಪುರ ತಾಲೂಕಿನ ಲಕ್ಕೇಬೈಲ್ ಗ್ರಾಮದ ಮಂಜುನಾಥ ಸೋಮಪ್ಪ ಹಮ್ಮನ್ನರ (30) ಹಾಗೂ ಬೆಳಗಾವಿ ತಾಲೂಕಿನ ಹುದಲಿ ಗ್ರಾಮದ ಗಜಬರಲಿ ಗೌಸ್ ಮುದ್ದಿನ್‌ ಜಿಡ್ಡಿಮನಿ(39) ಎಂಬವರನ್ನು ಬಂಧಿಸಲಾಗಿದೆ.

ಡಿಎಪಿ ರಸಗೊಬ್ಬರ ಚೀಲಗಳು ಕಳುವಾಗಿರುವ ಬಗ್ಗೆ ಹೊನಗಾ ಗ್ರಾಮದ ಶಿವಾಜಿ ಬಾಳಾರಾಮ ಆನಂದಾಚೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಕೊಂಡಿದ್ದರು. ಬೆಳಗಾವಿ ಗ್ರಾಮೀಣ ಪಿಐ ಶ್ರೀನಿವಾಸ ಹಾಂಡ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ವಾರದ ಹಿಂದಷ್ಟೇ ದೇಸೂರು ರೈಲ್ವೆ ಗೋದಾಮಿನಿಂದ ಕಳವಾಗಿದ್ದ ರಸಗೊಬ್ಬರ ಚೀಲಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ಸು ಸಾಧಿಸಿದ್ದಾರೆ.

You might also like
Leave a comment