This is the title of the web page

ಮುಸ್ಲಿಮರ ಹತ್ಯೆಗೆ ಕರೆ ನೀಡಿದ್ದ ಯತಿ ನರಸಿಂಹಾನಂದ ಬಂಧನ

ಡೆಹರಾಡೂನ, 16- ಶಸ್ತ್ರಾಸ್ತ್ರ ಕೈಗೆತ್ತಿಕೊಂಡು ದೇಶದ ಮುಸ್ಲಿಮರ ನರಮೇಧ ನಡೆಸಬೇಕೆಂದು  ಕರೆ ನೀಡಿದ್ದ ಹಿಂದೂ ಧಾರ್ಮಿಕ ಮುಖಂಡ ಯತಿ ನರಸಿಂಹಾನಂದನನ್ನು ಕೊನೆಗೂ ಶನಿವಾರ ಬಂಧಿಸಲಾಗಿದೆ.

ಕಳೆದ ತಿಂಗಳು ಹರಿದ್ವಾರದಲ್ಲಿ ಧರ್ಮ ಸಂಸದ ಆಯೋಜಿಸಿದ್ದ ಗಾಜಿಯಾಬಾದ್‌ನ ದಾಸ್ನಾ ದೇವಸ್ಥಾನದ ಅರ್ಚಕ ನರಸಿಂಹಾನಂದ ಈ ಹಿಂದೆಯೂ ಹಲವು ವಿವಾದಗಳ ಕೇಂದ್ರಬಿಂದುವಾಗಿದ್ದರು.

ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡುವ ಘೋಷಣೆಗಳನ್ನು ಎತ್ತಿದ ಹರಿದ್ವಾರದ ಈ ಕಾರ್ಯಕ್ರಮದ ವಿರುದ್ಧ ದಾಖಲಿಸಲಾದ ಎಫ್‌ಐಆರ್‌ಗಳಲ್ಲಿ ಹೆಸರಿಸಲಾದ ಇತರ 10 ಮಂದಿಯಲ್ಲಿ ಇವರೂ ಸೇರಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕಿ ಅಶ್ವಿನಿ ಉಪಾಧ್ಯಾಯ ಮತ್ತು ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ಉದಿತಾ ತ್ಯಾಗಿ ಕೂಡ ಉಪಸ್ಥಿತರಿದ್ದರು.

ಜನವರಿ 13 ರಂದು ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ವಾಸಿಂ ರಿಜ್ವಿ ಅಲಿಯಾಸ್ ಜಿತೇಂದ್ರ ತ್ಯಾಗಿ ಅವರನ್ನು ಉತ್ತರಾಖಂಡ್ ಪೊಲೀಸರು ಹರಿದ್ವಾರದಲ್ಲಿ ಬಂಧಿಸಿದ್ದರು.

ಜಿತೇಂದ್ರ ತ್ಯಾಗಿಯ ಬಂಧನದ ಸಮಯದಲ್ಲಿ  ಪೊಲೀಸರಿಗೆ “ತುಮ್ ಸಬ್ ಮರೋಗೆ (ನೀವೆಲ್ಲರೂ ಸಾಯುತ್ತೀರಿ)” ಎಂದು ನರಸಿಂಹಾನಂದ ಬೆದರಿಕೆ ಹಾಕುತ್ತಿರುವ ವಿಡಿಯೋ ಬಹಿರಂಗವಾಗಿತ್ತು.

ಹರಿದ್ವಾರದ ಎರಡು ಪ್ರತ್ಯೇಕ ಘಟನೆಗಳಲ್ಲಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ವಿರುದ್ಧ ಮಾಡಿದ ದ್ವೇಷ ಭಾಷಣಗಳ ತನಿಖೆಯನ್ನು ಕೋರಿ ಪಾಟ್ನಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರು ಮತ್ತು ಪತ್ರಕರ್ತರೊಬ್ಬರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲೆ ಸುಪ್ರೀಮ ಕೋರ್ಟ ಬುಧವಾರ ಉತ್ತರಾಖಂಡ ಸರ್ಕಾರ, ಕೇಂದ್ರ ಮತ್ತು ದೆಹಲಿಗೆ ನೋಟಿಸ್ ಜಾರಿ ಮಾಡಿತ್ತು. ಅದನ್ನು ಯತಿ ನರಸಿಂಗಾನಂದರು ಮತ್ತು ಇನ್ನೊಂದನ್ನು ದೆಹಲಿಯಲ್ಲಿ ‘ಹಿಂದೂ ಯುವ ವಾಹಿನಿ’ ಆಯೋಜಿಸಿದ್ದರು.

ಶುಕ್ರವಾರ ವಾಸಿಂ ರಿಜ್ವಿ ಅಲಿಯಾಸ್ ಜಿತೇಂದ್ರ ತ್ಯಾಗಿಯನ್ನು ಪೊಲೀಸರು ಬಂಧಿಸಿದ ನಂತರ ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಎರಡನೇ ವ್ಯಕ್ತಿ.

ಹರಿದ್ವಾರ ದ್ವೇಷದ ಭಾಷಣ ಏನು?

ಡಿಸೆಂಬರ್ 2021 ರಲ್ಲಿ ಹರಿದ್ವಾರದಲ್ಲಿ ನಡೆದ ಧಾರ್ಮಿಕ ಸಭೆ ಅಥವಾ ‘ಧರ್ಮ ಸಂಸದ’ ನಲ್ಲಿ, ಹಲವಾರು ಹಿಂದೂ ಪುರೋಹಿತರು ಇಸ್ಲಾಂ ಧರ್ಮದ ವಿರುದ್ಧ ಆಕ್ಷೇಪಾರ್ಹ ಮತ್ತು ಪ್ರಚೋದಕ ಹೇಳಿಕೆಗಳನ್ನು ನೀಡಿದ್ದಾರೆ. ಅಲ್ಪಸಂಖ್ಯಾತ ಸಮುದಾಯಗಳ ನರಸಂಹಾರ ನಡೆಸಬೇಕೆಂಬ ಭಾಷಣಗಳ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡವು.

ಯತಿ ನರಸಿಂಹಾನಂದ್ ಸೇರಿದಂತೆ ಹತ್ತಕ್ಕೂ ಹೆಚ್ಚು ಜನರನ್ನು ದ್ವೇಷ ಭಾಷಣ ಪ್ರಕರಣದಲ್ಲಿ ದಾಖಲಿಸಿರುವ ಎಫ್‌ಐಆರ್‌ಗಳಲ್ಲಿ ಹೆಸರಿಸಲಾಗಿತ್ತಾದರೂ ಮೂರು ವಾರಕ್ಕೂ ಹೆಚ್ಚು ಸಮಯವಾದರೂ ಬಂಧನವಾಗಿರಲಿಲ್ಲ

ಈ ಪ್ರಕರಣದಲ್ಲಿ ಕೈಗೊಂಡ ಕ್ರಮಗಳ ಕುರಿತು ಹತ್ತು ದಿನಗಳೊಳಗೆ ಅಫಿಡವಿಟ್ ಸಲ್ಲಿಸುವಂತೆ ಉತ್ತರಾಖಂಡ ಸರ್ಕಾರಕ್ಕೆ ಸುಪ್ರೀಂ ಕೋರ್ಟ ಬುಧವಾರ ಸೂಚಿಸಿತ್ತು.

ದೇಶದಲ್ಲಿ ಹೆಚ್ಚುತ್ತಿರುವ ದ್ವೇಷ ಭಾಷಣಗಳ ಬಗ್ಗೆ ದೇಶದ ಹಲವು ಮಾಜಿ ಸೇನಾ ಮುಖ್ಯಸ್ಥರು ರಾಷ್ಟ್ರಪತಿ ಮತ್ತು ಪ್ರಧಾನಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದರು.

ದ್ವೇಷ ಭಾಷಣಗಳ ವಿಡಿಯೋಗಳು ದೇಶ, ವಿದೇಶಗಳಲ್ಲಿ ಭಾರಿ ಆಕ್ರೋಶ ಉಂಟುಮಾಡಿದ ಮೂರು ವಾರಗಳ ನಂತರ ಈ ಬಂಧನ ನಡೆದಿದೆ.

You might also like
Leave a comment