This is the title of the web page

ಎಟಿಎಂನಿಂದ ಬಂತು ಐದು ಪಟ್ಟು ಹೆಚ್ಚು ಹಣ; ಮುಗಿಬಿದ್ದ ಜನತೆ

 

ನಾಗಪುರ, ೬-:  ಎಟಿಎಂನಿಂದ ವ್ಯಕ್ತಿಯೊಬ್ಬರು 500 ರೂಪಾಯಿ ಹಣ ಡ್ರಾ ಮಾಡಲು ಹೋದಾಗ 5 ಪಟ್ಟು ಹೆಚ್ಚಿನ ಹಣ ಬಂದ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ.

ನಾಗಪುರ ಖಪರ್ಖೇಡಾ ಪಟ್ಟಣದ ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋಗಿದ್ದ ವ್ಯಕ್ತಿ 500 ರೂಪಾಯಿಗೆ ಸೈನ್ ಮಾಡಿದ್ದರು, ಆದರೆ ಅವರಿಗೆ 500 ರೂಪಾಯಿ ಮುಖಬೆಲೆಯ 5 ನೋಟುಗಳು ಅಂದರೆ 2,500 ರೂಪಾಯಿ ಬಂದಿದೆ. ಕಂಗಾಲಾದ ಅವರು ಮತ್ತೊಮ್ಮೆ ಪ್ರಯತ್ನ ಮಾಡಿದ್ದಾರೆ, ಆಗಲೂ ಹೆಚ್ಚು ಹಣ ಬಂದಿದೆ.

ಆ ವ್ಯಕ್ತಿ ಎಟಿಎಂದಿಂದ ಹಣಪಡೆಯಲು ಹೊರಗೆ ನಿಂತಿದ್ದವರಿಗೆ ತಿಳಿಸಿದ್ದಾರೆ, ಅವರಿಗೂ ಕೂಡ ತಾವು ಬೇಡಿದ ಮೊತ್ತದ ಐದು ಪಟ್ಟು ಹೆಚ್ಚು ಹಣ ಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ದುಡ್ಡು ಡ್ರಾ ಮಾಡಲು ಜನರು ಎಟಿಎಂ ಮುಂದೆ ಮುಗಿಬಿದ್ದಿದ್ದಾರೆ. ತಕ್ಷಣವೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಹೋಗಿದೆ. ಸ್ಥಳಕ್ಕೆ ಬಂದ ಪೊಲೀಸರು ಎಟಿಎಂ ಅನ್ನು ಸ್ಥಗಿತಗೊಳಿಸಿದ್ದಾರೆ.

ಪೊಲೀಸರು ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ಪರಿಶೀಲನೆ ವೇಳೆ 100 ರೂಪಾಯಿ ಮುಖಬೆಲೆಯ ನೋಟನ್ನು ಇಡಬೇಕಿದ್ದ ಟ್ರೇನಲ್ಲಿ 500 ರೂಪಾಯಿ ಮುಖಬೆಲೆಯ ನೋಟುಗಳನ್ನು ತಪ್ಪಾಗಿ ಇಡಲಾಗಿತ್ತು. ಈ ಕಾರಣಕ್ಕೆ ಎಟಿಎಂ ಹೆಚ್ಚುವರಿ ನೋಟುಗಳನ್ನು ನೀಡುತ್ತಿತ್ತು ಎಂದು ಅವರು ಪತ್ತೆ ಹಚ್ಚಿ ನಂತರ ತಪ್ಪನ್ನು ಸರಿಪಡಿಸಿದ್ದಾರೆ.

You might also like
Leave a comment