Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

National News

ತೆಲಂಗಾಣದ ನಾಲ್ವರು ಶಾಸಕರ ಖರೀದಿಗೆ ಯತ್ನ : ಸಿಕ್ಕಿ ಬಿದ್ದ ಮೂವರ ಬಂಧನ


ಹೈದರಾಬಾದ​: ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ನಾಲ್ವರು ಶಾಸಕರನ್ನು ಖರೀದಿಸುವ ಪ್ರಯತ್ನ ವಿಫಲವಾಗಿದ್ದು, ಶಾಸಕರೇ ನೀಡಿದ ಸುಳಿವಿನ ಮೇರೆಗೆ ಮೂವರು ಆರೋಪಿಗಳನ್ನು ಫಾರ್ಮ​ ಹೌಸ್ ಒಂದರಲ್ಲಿ  ಪೊಲೀಸರು ಬಂಧಿಸಿದ್ದಾರೆ.

ತೆಲಂಗಾಣ ರಾಷ್ಟ್ರೀಯ ಸಮಿತಿ ಸರ್ಕಾರವನ್ನು ದುರ್ಬಲಗೊಳಿಸುವ ಪ್ರಯತ್ನ ಇದಾಗಿದ್ದು, ನಾಲ್ವರು ಶಾಸಕರಲ್ಲಿ ಪ್ರಮುಖ ಶಾಸಕರೊಬ್ಬರಿಗೆ 100 ಕೋಟಿ ರೂಪಾಯಿಗೂ ಅಧಿಕ ಹಣದ ಆಮಿಷವೊಡ್ಡಿದ್ದರು ಎನ್ನಲಾಗಿದೆ. ಉಳಿದ ಶಾಸಕರಿಗೆ ತಲಾ 50 ಕೋಟಿ ರೂಪಾಯಿ ಆಸೆ ಹುಟ್ಟಿಸಿದ್ದರು ಎಂದು ತೆಲಂಗಾಣ ಪೊಲೀಸ್ ಮುಖ್ಯಸ್ಥ ಸ್ಟೆಫೆನ್​ ರವೀಂದ್ರ ಅವರು ಮಾಹಿತಿ ನೀಡಿದ್ದಾರೆ. ​

ಶಾಸಕರು ನಮಗೆ ಕರೆ ಮಾಡಿ, ಪಕ್ಷ ಬದಲಿಸಲು ಹಣದ ಆಮಿಷವೊಡ್ಡುತ್ತಿದ್ದಾರೆ ಎಂದು ಹೇಳಿದರು. ತಕ್ಷಣ ಕಾರ್ಯಪ್ರವೃತ್ತರಾದ ನಮ್ಮ ಪೊಲೀಸರು ದಾಳಿ ನಡೆಸಿದಾಗ ಮೂವರು ಸೆರೆಸಿಕ್ಕಿದ್ದಾರೆ. ಬಂಧಿತರು ನಕಲಿ ಗುರುತಿನ ಚೀಟಿಯೊಂದಿಗೆ ಹೈದರಾಬಾದ​ ಪ್ರವೇಶಿಸಿದ್ದಾರೆಂದು ರವೀಂದ್ರನ್​ ತಿಳಿಸಿದರು.

ಬಂಧಿತರನ್ನು ಹರಿಯಾಣ ಮೂಲದ ಪೂಜಾರಿ ಸತೀಶ​ ಶರ್ಮಾ ಅಲಿಯಾಸ್​ ರಾಮ​ ಚಂದ್ರ ಭಾರತಿ, ತಿರುಪತಿ ಮೂಲದ ಸಂತ ಡಿ. ಸಿಂಹಯಾಜಿ ಮತ್ತು  ಉದ್ಯಮಿ ನಂದಕುಮಾರ​ ಎಂದು ಗುರುತಿಸಲಾಗಿದೆ. ತಾಂಡೂರು ಶಾಸಕ ಪೈಲಟ್ ರೋಹಿತ ರೆಡ್ಡಿ ಅವರ ಫಾರ್ಮ‌ಹೌಸ್‌ನಲ್ಲಿ ವ್ಯವಹಾರ ನಡೆದಿದ್ದು, ರೋಹಿತ​ ರೆಡ್ಡಿ ಅವರನ್ನು ಸಹ ದೂರುದಾರ ಎಂದು ಉಲ್ಲೇಖಿಸಲಾಗಿದೆ.

ಅಂದಹಾಗೆ 2019 ರಿಂದಲೂ ಬಿಜೆಪಿಯು ತೆಲಂಗಾಣದಲ್ಲಿ ಆಪರೇಷನ್ ಕಮಲವನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಲಾಗುತ್ತಿದೆ. ದಕ್ಷಿಣದಲ್ಲಿ ಅಧಿಕಾರದಲ್ಲಿ ಇರದೇ ಇರುವ ರಾಜ್ಯಗಳಲ್ಲಿ ಪಕ್ಷವನ್ನು ಬಲಗೊಳಿಸಲು ಬಿಜೆಪಿ ಅಡ್ಡದಾರಿ ಹಿಡಿಯುತ್ತಿದೆ ಎಂದು ಆರೋಪಿಸಲಾಗಿದೆ. ಕಳೆದ ಆಗಸ್ಟ್‌ನಲ್ಲಿ ಟಿಆರ್‌ಎಸ್‌ನ ಸುಮಾರು 18 ಶಾಸಕರು ಶೀಘ್ರದಲ್ಲೇ ಬಿಜೆಪಿಗೆ ಸೇರಲಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿಕೊಂಡಿದ್ದರು.

ತೆಲಂಗಾಣ ಬಿಜೆಪಿ ನಾಯಕರಾದ ಡಿಕೆ ಅರುಣಾ ಮತ್ತು ನಿಜಾಮಾಬಾದ‌ನ ಬಿಜೆಪಿ ಸಂಸದ ಡಿ.ಅರವಿಂದ ಅವರು ಟಿಆರ್​ಎಸ್​ ಆರೋಪವನ್ನು ಅಲ್ಲಗೆಳೆದಿದ್ದು, ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಮತ್ತು ಅವರ ಪಕ್ಷವು ಮುನುಗೋಡೆ ಗಮನವನ್ನು ಬೇರೆಡೆ ಸೆಳೆಯಲು ಕುದುರೆ ವ್ಯಾಪಾರನಾಟಕವನ್ನು ಆಯೋಜಿಸಿದೆ ಎಂದು ಟೀಕಿಸಿದ್ದಾರೆ. ಮುನುಗೊಡೆ ಕ್ಷೇತ್ರವನ್ನು ಕಳೆದುಕೊಳ್ಳುವ ಭೀತಿ ಚಂದ್ರಶೇಖರ​ ಅವರಿಗೆ ಎದುರಾಗಿದೆ. ಹೀಗಾಗಿ ಈ ನಾಟಕ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕ ವಿವೇಕ​ ವೆಂಕಟಸ್ವಾಮಿ ಆರೋಪಿಸಿದ್ದಾರೆ.

ಇನ್ನು ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಿಜೆಪಿ ವಿರುದ್ಧ ಟಿಆರ್ ಎಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.


A B Dharwadkar
the authorA B Dharwadkar

Leave a Reply