This is the title of the web page

‘ಅಝಾನ್’ ಪ್ರತಿಯಾಗಿ ಮಂದಿರಗಳಲ್ಲಿ ಬೆಳಗಿನ ‘ಸುಪ್ರಭಾತ’ ಪ್ರಾರಂಭ

ಬೆಳಗಾವಿ, 9- ಪ್ರತಿದಿನ ಮುಂಜಾನೆ ಮಸೀದಿಗಳಲ್ಲಿ ಮೈಕ್ ಮೂಲಕ ಹೇಳಲಾಗುವ ‘ಅಝಾನ್’ ವಿರುದ್ಧ ಹಿಂದು ಸಂಘಟನೆಗಳು ಪ್ರಾರಂಭಿಸಿರುವ ‘ಸುಪ್ರಭಾತ ಅಭಿಯಾನ’ ಬೆಳಗಾವಿ ನಗರದಲ್ಲಿ ಸೋಮವಾರದಿಂದ ಆರಂಭಗೊಂಡಿದೆ.

ಸಂಗೊಳ್ಳಿ ರಾಯಣ್ಣ (ಆರ್ ಟಿಓ) ವೃತ್ತದ ಬಳಿ ಇರುವ ಆಂಜನೇಯ ದೇವಸ್ಥಾನದಲ್ಲಿ ಆರತಿ ಮಾಡಿ, ಹನುಮಾನ ಚಾಲೀಸಾ ಪಠಣ ಮಾಡುವದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ಜಿಲ್ಲೆಯ ಹಲವು ದೇವಸ್ಥಾನಗಳಲ್ಲಿಯೂ ಭಜನೆ, ಹನುಮಾನ ಚಾಲೀಸಾ, ಮಂತ್ರ ಪಠಣ ಮಾಡಲಾಗಿದೆ ಎಂಬ ವರದಿಗಳಿವೆ. ಎಲ್ಲಿಯವರೆಗೆ ಮಸೀದಿಗಳಲ್ಲಿ ಮೈಕ್ ಮೂಲಕ ‘ಅಝಾನ್’ ಬಿತ್ತರಿಕೆ ನಿಲ್ಲುವದಿಲ್ಲವೋ ಅಲ್ಲಿಯವರೆಗೆ ಈ ಅಭಿಯಾನ ಮುಂದುವರೆಯಲಿದೆ ಎಂದು ಹಿಂದು ಸಂಘಟನೆಗಳು ತಿಳಿಸಿವೆ.

‘ಸುಪ್ರಭಾತ’ ಅಭಿಯಾನ ಮೊದಲು ಮಸೀದಿಗಳ ಬಳಿಯಿರುವ ಮಂದಿರಗಳಲ್ಲಿ ನಡೆಸಲು ಉದ್ದೇಶಿಸಿದ್ದು, ಬೆಳಗಾವಿ ನಗರದ ಇಂತಹ ಕೆಲವು ಸ್ಥಳಗಳನ್ನು ಗುರುತಿಸಲಾಗಿದೆ ಎನ್ನಲಾಗಿದೆ. ಬೆಳಗಾವಿ ನಗರದ 100 ಹಾಗೂ ಜಿಲ್ಲೆಯ 500ಕ್ಕೂ ಹೆಚ್ಚು ಮಸೀದಿಗಳು ಮತ್ತು ಸೂಕ್ಷ್ಮ ಪ್ರದೇಶದಲ್ಲಿ ಪೋಲೀಸ ಬಂದೋಬಸ್ತ ಮಾಡಲಾಗಿದೆ.

You might also like
Leave a comment