This is the title of the web page

ಸಂಕೇಶ್ವರದಲ್ಲಿ ಕುತ್ತಿಗೆಗೆ ಚಾಕು ಹಿಡಿದು ಮನೆ ಲೂಟಿ ಮಾಡಿದ ಡಕಾಯಿತರು

ಬೆಳಗಾವಿ, 15- ಎಂಟರಿಂದ ಹತ್ತು ಜನರಿದ್ದ ಡಕಾಯಿತರ ತಂಡವೊಂದು ಎರಡು ಮನೆಗಳಿಗೆ ನುಗ್ಗಿ 140ಗ್ರಾಂ ಚಿನ್ನಭರಣ ಹಾಗೂ 75,000ರೂಪಾಯಿ ನಗದನ್ನು ದೋಚಿಕೊಂಡು ಹೋಗಿದ್ದಾರೆ.

ಈ ಘಟನೆ ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ಸೋಮವಾರ ರಾತ್ರಿ 8ಗಂಟೆ ಸುಮಾರಿಗೆ ನಡೆದಿದೆ.

ಮೊದಲು ರಾಮ ಕಿಲ್ಲೆದಾರ ಎಂಬವರ ಮನೆಗೆ ನುಗ್ಗಿದ ದರೋಡೆಖೋರರು, ಮನೆಯ ಬೀಗಮುರಿದು, ಮನೆಯ ಬಿರುವಿನಲಿಟ್ಟಿದ್ದ 30ಗ್ರಾಂ ಚಿನ್ನದ ಆಭರಣಗಳನ್ನು ತೆಗೆದುಕೊಂಡಿದ್ದಾರೆ. ನಂತರ ಹತ್ತಿರದಲ್ಲಿದ್ದ ರಾಮ ಕಿಲ್ಲೆದಾರ ಅವರ ಸಂಬಂಧಿಕರ ಮನೆಗೆ ಹೋಗಿ, ಮನೆಯಲಿದ್ದ ಮೂವರನ್ನು ಹಗ್ಗದಿಂದ ಕಟ್ಟಿ ನಂತರ ಬಿರುವಿನಲ್ಲಿದ್ದ 110ಗ್ರಾಂ ಬಂಗಾರದ ಆಭರಣ ಹಾಗೂ 75,000 ರೂಪಾಯಿ ದೋಚಿಕೊಂಡಿದ್ದಾರೆ.

ಕಟ್ಟಿ ಹಾಕಲ್ಪಟವರು ಕೂಗಬಾರದೆಂದು ಚಾಕುವಿನಿಂದ ಕುತ್ತಿಗೆಗೆ ಹಿಡಿದಿದ್ದರು ಎನ್ನಲಾಗಿದ್ದು, ತಮ್ಮ ಗುರುತು ಸಿಗಬಾರದೆಂದು ಡಕಾಯಿತರು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರು.

ಘಟನಾ ಸ್ಥಳಗಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ತೆರಳಿ ಪರಿಶೀಲಿಸಿದರು.

You might also like
Leave a comment