This is the title of the web page

ಬೆಂಗಳೂರು ಪ್ರಥಮ, ಹಾಸನ ತಂಡ ದ್ವಿತೀಯ

ಅಥಣಿ, 13- ಇಂದು ರವಿವಾರ ಮುಕ್ತಾಯವಾದ ಕರ್ನಾಟಕ ಹ್ಯಾಂಡಬಾಲ್ ಅಸೋಷಿಯೇಶನ್, ಬೆಳಗಾವಿ ಜಿಲ್ಲಾ ಹ್ಯಾಂಡಬಾಲ್ ಅಸೋಷಿಯೇಶನ್ ಹಾಗೂ ಜಾಧವಜಿ ಶಿಕ್ಷಣ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಪುರುಷರ ಆಹ್ವಾನಿತ ಹೊನಲು ಬೆಳಕಿನ ಹ್ಯಾಂಡಬಾಲ್ ಪಂದ್ಯಾವಳಿಯಲ್ಲಿ ಬೆಂಗಳೂರು ತಂಡ ಪ್ರಥಮ ಸ್ಥಾನ, ಹಾಸನ ತಂಡ ದ್ವಿತೀಯ ಸ್ಥಾನ, ಎಸ್. ಡಿ. ಎಮ್ ಉಜೀರೆ ತಂಡ ತೃತೀಯ ಸ್ಥಾನ, ಉಡುಪಿ ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡರು.

ಈ ಪಂದ್ಯಾವಳಿ ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ ಎಮ್ ಪಾಟೀಲ ಹ್ಯಾಂಡಬಾಲ್ ತಂಡಕ್ಕೆ ಸೇರ್ಪಡೆಯಾಗುವ ಅನೇಕ ಪ್ರತಿಭೆಗಳನ್ನು ರೂಪಿಸುವ ಗರಡಿಯಾಗಿ ನಮ್ಮ ಕರ್ನಾಟಕ ಹ್ಯಾಂಡಬಾಲ್ ಅಸೋಷೊಯೇಶನ್ ರೂಪುಗೊಂಡಿದೆ, ಮುಂದಿನ ದಿನಮಾನಗಳಲ್ಲಿ ಹೆಚ್ಚೆಚ್ಚು ಹ್ಯಾಂಡಬಾಲ್ ಕ್ರೀಡಾಕೂಟಗಳನ್ನು ಆಯೋಜಿಸಿ ಸಮರ್ಥರನ್ನು ಆಯ್ಕೆ ಮಾಡಲಾಗುವುದು ಎಂದು ಅವರು ಹೇಳಿದರು.

ಅನಂತರ ಮಾತನಾಡಿದ ಅಥಣಿ ಪಿ.ಎಸ್.ಐ ಕುಮಾರ ಹಾಡಕರ ಅವರು ಮಾತನಾಡುತ್ತಾ, ಅಥಣಿ ಭಾಗಕ್ಕೆ ಹ್ಯಾಂಡಬಾಲ್ ಕ್ರೀಡೆಯನ್ನು ಪರಿಚಯಿಸಿ ಇವತ್ತು ಅನೇಕ ಜನ ಕ್ರೀಡಾ ಪಟುಗಳನ್ನು ರೂಪಿಸಿ, ಅಥಣಿಯಲ್ಲಿ ಇಂತಹ ಸ್ಪರ್ಧೆಯನ್ನು ಆಯೋಜಿಸಿರುವುದು ಎಲ್ಲರಿಗೂ ಮಾದರಿ ಆ ಎಲ್ಲ ಕ್ರೀಡಾ ತರಬೇತುದಾರರಿಗೂ ಹಾಗೂ ಸಂಘಟಕರಿಗೂ ಅಭಿನಂದನೆಗಳು ಎಂದರು.

ಪಂದ್ಯಾವಳಿಯಲ್ಲಿ ಅತ್ಯುತ್ತಮ ಆಲರೌಂಡರ್ ಪ್ರಶಸ್ತಿಯನ್ನು ಬೆಂಗಳೂರು ತಂಡದ ಎಸ್. ಶೇಖರ, ಅತ್ಯುತ್ತಮ ಆಟಗಾರ ಹಾಸನ ತಂಡದ ರತನಕುಮಾರ, ಅತ್ಯುತ್ತಮ ಕ್ಷೇತ್ರ ರಕ್ಷಕ ಎಸ್ ಡಿ ಎಮ್ ಉಜೀರೆ ತಂಡದ ಭೀಮಾ ಅವರು ಪಡೆದುಕೊಂಡರು.

ಜೆ ಎ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್ ಎಸ್ ಗೌಡರ ಹಾಗೂ ಡಾ ಕೆ. ರಾಘವೇಂದ್ರ ಮಾತನಾಡಿದರು. ಈ ವೇಳೆ ಆರ್ ಎಮ್ ದೇವರಡ್ಡಿ, ಆನಂದ ಟೊಣಪಿ, ಬಿಪಿನ್ ತೇಜವಾಣಿ, ರವೀಂದ್ರ ಬಿರಾದಾರ, ವಿನೋದ ಎಸ್., ಪ್ರಮೋದ ದೇಸಾಯಿ, ಅಥರ್ವ ದೇಶಪಾಂಡೆ, ಮಹಾಂತೇಶ ಗುಡ್ಡಾಪೂರ, ಮಹೇಶ ಮಾಯನಟ್ಟಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.

 

You might also like
Leave a comment