Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

Crime News

ಮದುವೆ ಮಾಡುವುದಾಗಿ ನಂಬಿಸಿ ಹತ್ಯೆ; ಮರ್ಮಾಂಗಕ್ಕೆ ಕಲ್ಲಿಂದ ಹೊಡೆದು ಯುವಕ, ಕುತ್ತಿಗೆ ಬಿಗಿದು ಯುವತಿಯ ಕೊಲೆಗೈದ ಅಣ್ಣ, ಮಾವಂದಿರು


ಬಾಗಲಕೋಟ: ಬಾಗಲಕೋಟ ನಗರದಲ್ಲಿ ಕಾಣೆಯಾಗಿದ್ದ ಪ್ರೇಮಿಗಳ ಪ್ರಕರಣಕ್ಕೆ ಹೊಸ ಟ್ವಿಸ್ಟ ಸಿಕ್ಕಿದೆ. ಮಗಳ ಪ್ರೀತಿ ವಿರೋಧಿಸಿ ಕುಟುಂಬದವರಿಂದಲೇ ಇಬ್ಬರನ್ನೂ ಕೊಲೆ ಮಾಡಲಾಗಿದೆ.

ವಿಶ್ವನಾಥ(22), ರಾಜೇಶ್ವರಿ(17) ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ, ಹನುಮಂತ, ಬೀರಪ್ಪ ಅವರನ್ನು ಬಂಧಿಸಲಾಗಿದೆ. ವೇಲ್ ನಿಂದ ಕತ್ತು ಬಿಗಿದು ರಾಜೇಶ್ವರಿಯ ಕೊಲೆ ಮಾಡಲಾಗಿದೆ. ಸಹೋದರ ಹಾಗೂ ಮಾವಂದಿರು ರಾಜೇಶ್ವರಿಯ ಕೊಲೆ ಮಾಡಿದ್ದಾರೆ. ವಿಶ್ವನಾಥನ ಮರ್ಮಾಂಗ, ಎದೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಲಾಗಿದೆ.

ಇಬ್ಬರ ಮದುವೆ ಮಾಡುವುದಾಗಿ ನಂಬಿಸಿ ವಾಹನದಲ್ಲಿ ಕರೆದುಕೊಂಡು ಬಂದಿದ್ದು, ವಾಹನದಲ್ಲೇ ಇಬ್ಬರ ಕೊಲೆ ಮಾಡಿದ್ದಾರೆ. ನಂತರ ಕೃಷ್ಣಾ ನದಿಗೆ ಮೃತ ದೇಹಗಳನ್ನು ಎಸೆದಿದ್ದಾರೆ. ಅಕ್ಟೋಬರ 11 ರಂದು ರಾತ್ರಿ ಪುತ್ರಿ ಅಪಹರಣದ ಬಗ್ಗೆ ಕೊಲೆಯಾದ ರಾಜೇಶ್ವರಿ ತಂದೆ ಪರಸಪ್ಪ ಸುಳ್ಳು ದೂರು ನೀಡಿದ್ದ. ಬಾಗಲಕೋಟ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಅಕ್ಟೋಬರ 3 ರಂದು ವಿಶ್ವನಾಥ ಕಾಣೆಯಾದ ಬಗ್ಗೆ ಗದಗ ಜಿಲ್ಲೆ ನರಗುಂದ ಠಾಣೆಗೆ ವಿಶ್ವನಾಥನ ತಂದೆ ದೂರು ನೀಡಿದ್ದರು. ಅಕ್ಟೋಬರ 15 ರಂದು ರಾಜೇಶ್ವರಿಯ ಅಣ್ಣ ರವಿಯನ್ನು ಸಂಶಯದ ಮೇಲೆ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ನದಿಯಲ್ಲಿ ಇನ್ನೂ ವಿಶ್ವನಾಥ, ರಾಜೇಶ್ವರಿ ಶವ ಪತ್ತೆಯಾಗಿಲ್ಲವೆನ್ನಲಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.


Leave a Reply