This is the title of the web page

ಏಡ್ಸ ಲಸಿಕೆಯ ಪ್ರಯೋಗ ಆರಂಭ

ವಾಷಿಂಗ್ಟನ್, 28- ಮೆಸೆಂಜರ್ ಆರ್‌ಎನ್‌ಎ ತಂತ್ರಜ್ಞಾನವನ್ನು ಬಳಸುವ ಎಚ್‌ಐವಿ ಲಸಿಕೆಯನ್ನು ಮಾನವರಲ್ಲಿ ಪರೀಕ್ಷಿಸಲು ಪ್ರಾರಂಭಿಸಲಾಗಿದೆ ಎಂದು ಬಯೋಟೆಕ್ ಸಂಸ್ಥೆ ಮಾಡರ್ನಾ ಮತ್ತು ಇಂಟರ್‌ನ್ಯಾಶನಲ್ ಏಡ್ಸ್ ಲಸಿಕೆ ಇನಿಶಿಯೇಟಿವ್ ಗುರುವಾರ ತಿಳಿಸಿದೆ.

ಏಡ್ಸ ಇಲ್ಲದ 56 ಆರೋಗ್ಯವಂತ ವಯಸ್ಕರಲ್ಲಿ ಪ್ರಯೋಗವನ್ನು ಅಮೇರಿಕದಲ್ಲಿ ನಡೆಸಲಾಗುತ್ತಿದೆ.

ನಾಲ್ಕು ದಶಕಗಳ ಸಂಶೋಧನೆಯ ಹೊರತಾಗಿಯೂ, ಪ್ರತಿ ವರ್ಷ ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಕೊಲ್ಲುವ ಏಡ್ಸ್‌ಗೆ ಕಾರಣವಾಗುವ ವೈರಸ್‌ನಿಂದ ಜನರನ್ನು ರಕ್ಷಿಸಲು ವೈದ್ಯರು ಇನ್ನೂ ಲಸಿಕೆಯನ್ನು ಅಭಿವೃದ್ಧಿಪಡಿಸಿಲ್ಲ. ಆದರೆ ಎಂಆರ್ಎನ್ಎ ತಂತ್ರಜ್ಞಾನದ ಯಶಸ್ಸು ಈಗ ಹೊಸ ಭರವಸೆಗಳನ್ನು ಹುಟ್ಟುಹಾಕಿದೆ.

ಈಗ ಪರೀಕ್ಷಿಸಲಾಗುತ್ತಿರುವ ಲಸಿಕೆಯು ಒಂದು ರೀತಿಯ ಪ್ರತಿಕಾಯದ ಉತ್ಪಾದನೆಯನ್ನು ಮಾಡುವುದು. ಇದು  ಏಡ್ಸ ರೋಗದ ಅನೇಕ ರೂಪಾಂತರಗಳ ವಿರುದ್ಧ ಕೆಲಸ ಮಾಡುತ್ತದೆ ಎನ್ನಲಾಗಿದೆ.

You might also like
Leave a comment