This is the title of the web page

ಬೆಳಗಾವಿ ಬಂದ್‌ಗೆ ಯಾರೂ ಬೆಂಬಲಿಸಬಾರದು : ಲಕ್ಷ್ಮಣ ಸವದಿ 

ಬೆಳಗಾವಿ: ಕೇಂದ್ರ ಸರ್ಕಾರ ಘೋಷಿಸಿರುವ ಅಗ್ನಿಪಥ ಯೋಜನೆ ಖಂಡಿಸಿ ಬೆಳಗಾವಿ ಬಂದ್ ಕರೆ ವಿಚಾರವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನಿರುದ್ಯೋಗ ಸಮಸ್ಯೆ ಪರಿಹಾರ ಕಲ್ಪಿಸುವ ಪ್ರಯತ್ನವಾಗಿ ಕೇಂದ್ರ ಸರ್ಕಾರ ಸೇನಾ ನೇಮಕಾತಿ ಯೋಜನೆ ಘೋಷಣೆ ಮಾಡಿದೆ.ನಾಳೆ ಕರೆ ನೀಡಲಾಗಿರುವ ಬೆಳಗಾವಿ ಬಂದ್ ಯಾರು ಬೆಂಬಲಿಸಬಾರದು ಎಂದು ಮನವಿ ಮಾಡಿಕೊಂಡಿದ್ಧಾರೆ.

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಗರಣದಿಂದ ಕಾಂಗ್ರೆಸ್‌ನ ಮಾನ ಮರ್ಯಾದೆ ಹರಾಜಾಗಿದೆ. ಇದನ್ನು ಮರೆ ಮಾಚಲು ಅಗ್ನಿಪಥ ಯೋಜನೆಯನ್ನ ನೆಪವಾಗಿಸಿಕೊಂಡು ಪ್ರತಿಭಟನೆ ಬಂದ್‌ಗೆ ಕಾಂಗ್ರೆಸ್​​ ಕರೆ ನೀಡಿದೆ. ಹಿಂಸಾಚಾರಕ್ಕೆ ಕಾಂಗ್ರೆಸ್ ಕುಮ್ಮಕ್ಕು ಕೊಡುತ್ತಿದೆ. ಇದರ ಅಂಗವಾಗಿ ನಾಳೆ ಬೆಳಗಾವಿಯಲ್ಲೂ ಬಂದ್ ನಡೆಸಿ, ಅರಾಜಕತೆ ಸೃಷ್ಟಿಸುವ ಹುನ್ನಾರಕ್ಕೆ ಯುವಕರು ಬಲಿಯಾಗಬಾರದು ಎಂದು ವಿನಂತಿಸಿಕೊಂಡಿದ್ದಾರೆ.

ನಾಳೆ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಿ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದಾರೆ. ಈ ವೇಳೆ ಕಾಂಗ್ರೆಸ್ ನವರು ನಾಡಿನ ಜನರ ದಿಕ್ಕು ತಪ್ಪಿಸಿ, ಪ್ರತಿಭಟನೆಗೆ ಮುಂದಾಗಿರುವುದು ಖಂಡನೀಯ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

 

You might also like
Leave a comment