This is the title of the web page

ಸ್ಮಾರ್ಟ’ ಆಗಲಿದೆ ಬೆಳಗಾವಿ ಜಿಲ್ಲಾಧಿಕಾರಿ ಕಛೇರಿ ಆವರಣ

ಬೆಳಗಾವಿ, 16- ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಖಾಲಿ ಇರುವ ಸ್ಥಳವನ್ನು ಜನಪರ ಯೋಜನೆಗಳಿಗೆ ಬಳಸಿಕೊಳ್ಳಲು ಜಿಲ್ಲಾಧಿಕಾರಿ ನಿತೇಶ ಪಾಟೀಲ ಯೋಜನೆಯೊಂದನ್ನು ರೂಪಿಸಲು ತೀರ್ಮಾನಿಸಿದ್ದಾರೆ.

ಜಿಲ್ಲಾಧಿಕಾರಿ ಆವರಣದಲ್ಲಿ ಪ್ರತಿಭಟನಾ ಸ್ಥಳ, ವಾಹನಗಳ ಪೆ ಪಾರ್ಕಿಂಗ್ ಹಾಗೂ ತಿನಿಸು ಕಟ್ಟೆಗಳನ್ನು ಸ್ಥಾಪಿಸುವ ಕುರಿತು ಯೋಜನೆಯನ್ನು ರೂಪಿಸಲಾಗುತ್ತಿದ್ದು, ಈ ಕುರಿತರಂತೆ ಡಿಸಿಪಿ ರವೀಂದ್ರ ಗಡಾದಿ ಅವರೊಂದಿಗೆ ಸಮಾಲೋಚನೆ ನಡೆಸಿ ಸ್ಥಳ ವೀಕ್ಷಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸಾಕಷ್ಟು ಖಾಲಿ ಜಾಗೆ ಇದ್ದರೂ ವಾಹನಗಳನ್ನು ಅದರಲ್ಲೂ ಕಾರ್ ಗಳನ್ನು ಬೇಕಾಬಿಟ್ಟಿ ಹಾಗೆ ನಿಲ್ಲಿಸಲಾಗುತ್ತಿದೆ.

ಒಂದೇ ಸಮಯದಲ್ಲಿ ನಾಲ್ಕೈದು ಪ್ರತಿಭಟನೆ ನಡೆದರೆ, ಪ್ರತಿಭಟನಾಕಾರರನ್ನು ನಿಭಾಯಿಸಲು ಕಷ್ಟಕರವಾಗುತ್ತದೆ. ಕಚೇರಿ ಸಮೀಪದಲ್ಲಿರುವ ದೊಡ್ಡದಾದ ಖಾಲಿ ಜಾಗವನ್ನು ಪ್ರತಿಭಟನಾ ಸ್ಥಳವಾಗಿ ಮಾರ್ಪಡಿಸುವುದರಿಂದ ಜನದಟ್ಟಣೆಯನ್ನು ಕಡಿಮೆಗೊಳಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

You might also like
Leave a comment