This is the title of the web page

ಮತದಾರರಿಗಾಗಿ ಡೆಸ್ಕ ಎತ್ತಿದ ಬೆಳಗಾವಿ ಜಿಲ್ಲಾಧಿಕಾರಿ

ಬೆಳಗಾವಿ, ೧೩- ಮತದಾರರಿಗೆ ಅನುಕೂಲ ಮಾಡಲು ಬೆಳಗಾವಿ ಜಿಲ್ಲಾಧಿಕಾರಿಗಳೇ ಡೆಸ್ಕಗಳನ್ನು ಸ್ವತಃ ಎತ್ತಿ ಹಾಕಿ ತಮ್ಮ ನಯ, ವಿನಯ ಸಾಬೀತುಪಡಿಸಿದ್ದಾರೆ.

ವಿಶ್ವೇಶ್ವರಯ್ಯ ನಗರದ ಸರಕಾರಿ ಶಾಲೆಯಲ್ಲಿರುವ ಮತಗಟ್ಟೆಯಲ್ಲಿ ಮತದಾರರ ಸರದಿ ಸಾಲು ದೊಡ್ಡದಾಗಿರುವುದನ್ನು ಗಮನಿಸಿದ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಸ್ವತಃ ಡೆಸ್ಕಗಳನ್ನು ಎತ್ತಿ ಹಾಕುವ ಮೂಲಕ ಮತದಾರರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಿಕೊಟ್ಟರು.

ಒಂದು ಸಣ್ಣ ಹುದ್ದೆ ಸಿಕ್ಕರೆ ಕೋಡು ಬಂದವರ ತರಹಾ ವರ್ತಿಸುವ ಸರಕಾರಿ ಸಿಬ್ಬಂದಿ ಇರುವ ಈ ಕಾಲದಲ್ಲಿ ಪ್ರಜೆಗಳ ಮುಂದೆ ಎನಗಿಂತ ಕಿರಿಯರಿಲ್ಲ ಎಂದು ವರ್ತಿಸುವ ಉನ್ನತ ಹುದ್ದೆಯಲ್ಲಿರುವ ಇಂಥ ಅಧಿಕಾರಿಗಳು ಅತೀ ವಿರಳ. ಅವರಿಗೆ ಒಂದು ಸಲ್ಯೂಟ್.

You might also like
Leave a comment