This is the title of the web page

ಮುಖಕ್ಕೆ ಮಸಿ; ಎಂಇಎಸ್ ನಿಂದ ಬೆಳಗಾವಿ ಬಂದ್ ಕರೆ

ಬೆಳಗಾವಿ, 13- ಬೆಳಗಾವಿ ಅಧಿವೇಶನ ವಿರೋಧಿಸಿ ಪರ್ಯಾಯವಾಗಿ ಸೋಮವಾರ ಮಹಾಮೇಳ ಆಯೋಜಿಸಿದ್ದ ಮಹಾರಾಷ್ಟ್ರ ಏಕೀಕರಣ ಸಮೀತಿ (ಎಂಇಎಸ್) ನಾಯಕರ ಮುಖಕ್ಕೆ ಮಸಿ ಬಳಿಯಲಾಗಿದೆ.

ನಗರದ ಟಿಳಕವಾಡಿಯ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಪೊಲೀಸ್ ಅನುಮತಿ ದೊರೆಯದಿದ್ದರೂ ವೇದಿಕೆ ನಿರ್ಮಿಸಿ ರಾಜ್ಯ ಸರಕಾರದ ವಿಧಾನ ಮಂಡಲ ಅಧಿವೇಶನಕ್ಕೆ ಪರ್ಯಾಯವಾಗಿ “ಮಹಾಮೇಳಾವ” ಹೆಸರಿನ ಸಾರ್ವಜನಿಕ ಸಭೆ ಇಂದು ಏರ್ಪಡಿಸಿದ್ದರು.

ಸಂಘಟನೆಯ ಪದಾಧಿಕಾರಿಗಳಾದ ದೀಪಕ ದಳವಿ, ಮಾಜಿ ಶಾಸಕ ಮನೋಹರ ಕಿಣೇಕರ, ಶುಭಂ ಶೇಳಕೆ ಮುಂತಾದವರು ವೇದಿಕೆ ತೆರವುಗೊಳಿಸಲು ಬಂದ ಪೊಲೀಸರೊಂದಿಗೆ ವಾದ ಮಾಡುತ್ತಿರುವಾಗ ಗುಂಪಿನಲ್ಲಿ ರಹಸ್ಯವಾಗಿ ಸೇರಿಕೊಂಡಿದ್ದ ಕರ್ನಾಟಕ ನವನಿರ್ಮಾಣ ಸೇನೆಯ ಕಾರ್ಯಕರ್ತರು ದೀಪಕ ದಳವಿ ಮುಖಕ್ಕೆ ಮಸಿ ಎರಚಿ ಕರ್ನಾಟಕ ಪರ ಘೋಷಣೆ ಕೂಗಿದರು.

ಪೊಲೀಸರಾಗಲಿ ಮತ್ತು ಅಲ್ಲಿ ಸೇರಿದ್ದ ಮರಾಠಿಗರಾಗಲಿ ಈ ಅನಿರೀಕ್ಷಿತ ಘಟನೆಯನ್ನು ನಿರೀಕ್ಷಿಸಿರಲಿಲ್ಲ. ಪೊಲೀಸರು ಕೆಲ ಕನ್ನಡ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಘಟನೆ ಖಂಡಿಸಿ ಎಂಇಎಸ್ ನಾಳೆ ಮಂಗಳವಾರ ಬೆಳಗಾವಿ ಬಂದ್ ಗೆ ಕರೆ ನೀಡಿದೆ.

You might also like
Leave a comment