This is the title of the web page

ನಡುಗುತಿದೆ ಬೆಳಗಾವಿ; ತಾಪಮಾನ 8.8 ಡಿಗ್ರಿ ಸೆಲ್ಸಿಯಸ್

ಬೆಳಗಾವಿ, 13- ಒಂದು ವಾರದಿಂದ ಇರುವ ಮೈಕೊರೆಯುವ ಚಳಿ ಗುರುವಾರವೂ ಕಡಿಮೆಯಾಗಿಲ್ಲ. ಕಳೆದ ವಾರ ಕನಿಷ್ಠ 9ರಿಂದ 10 ಡಿಗ್ರಿ ಸೆಲ್ಸಿಯಸ್ ರಷ್ಟಿದ್ದ ತಾಪಮಾನ ಕುಸಿದು 8ರಿಂದ 9 ಡಿಗ್ರಿ ಸೆಲ್ಸಿಯಸ್ ಗಿಳಿದಿದೆ.

ನಿನ್ನೆ ಬುಧವಾರ 8.6 ರಷ್ಟಿದ್ದ ತಾಪಮಾನ ಗುರುವಾರ 8.8ಡಿಗ್ರಿ ಸೆಲ್ಸಿಯಸ್ ಗೆ ಏರಿದೆ. ಬುಧವಾರದ ತಪಮಾನ ಕಳೆದ 10 ವರುಷದಲ್ಲೇ ಅತೀ ಕನಿಷ್ಠವಾಗಿತ್ತು.

ದಿನದಿಂದ ದಿನಕ್ಕೆ ಬೆಳಗಾವಿಯಲ್ಲಿ ತಾಪಮಾನ ಇಳಿಕೆ ಆಗುತ್ತಿದ್ದು ಗುರುವಾರ ಚಳಿಯ ಪ್ರಮಾಣ ಹೆಚ್ಚಾಗಿರುವುದರಿಂದ ಜನರು ಚಳಿಗೆ ಕಂಗಾಲಾಗಿದ್ದಾರೆ.

ಕಳೆದ ಬೇಸಿಗೆಯಲ್ಲಿ ಗರಿಷ್ಠ 39 ಡಿಗ್ರಿ ಸೆಲ್ಸಿಯಸ್ ತಲುಪಿದ್ದ ಬಿಸಿಲಿನ ತಾಪಮಾನ ಬುಧವಾರ  26 ಡಿಗ್ರಿ ಸೆಲ್ಸಿಯಸ್ ಇತ್ತು.

You might also like
Leave a comment