This is the title of the web page

ಶಾಲೆಗಳಲ್ಲಿ ಬಾಂಬ್ ಇಟ್ಟ ಇಮೇಲ್; ಜನತೆ ಕಂಗಾಲು, ಪೋಲೀಸರ ಶೋಧ ಕಾರ್ಯ

ಬೆಂಗಳೂರು, ೮- ರಾಜಧಾನಿ ಬೆಂಗಳೂರು ನಾಗರಿಕರು ಬೆಚ್ಚಿಬೀಳುವ ಆಘಾತಕಾರಿ ಮಾಹಿತಿ ಬಂದಿದ್ದು ಬೆಂಗಳೂರಿನ ಆರು ಕಡೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಅನಾಮಿಕ ಬೆದರಿಕೆಯ ಇ-ಮೇಲ್ ಸಂದೇಶ ಬಂದಿದೆ.

ಪೊಲೀಸ್ ಆಯುಕ್ತ ಕಮಲ ಪಂತ್ ಇಂದು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದು ಪ್ರಮುಖವಾಗಿ ಶಾಲೆಗಳನ್ನು ಗುರಿಯಾಗಿಟ್ಟುಕೊಂಡು ಬಾಂಬ್ ಇಟ್ಟಿರುವುದಾಗಿ ಬೆದರಿಕೆಯ ಇಮೇಲ್ ಬಂದಿದ್ದು, ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ಇಮೇಲ್ ಆಧರಿಸಿ ಖಾಸಗಿ ಶಾಲೆಗಳಿಗೆ ಬಾಂಬ್ ಸ್ಕ್ವಾಡ್ ಮತ್ತು ಶ್ವಾನ ದಳ ಮೂಲಕ ತೆರಳಿ ಪರಿಶೀಲನೆ ನಡೆಸಲಾಗುತ್ತಿದೆ. ಈಗಾಗಲೇ ಶಾಲೆಗಳಿಂದ ಸಿಬ್ಬಂದಿ ಮತ್ತು ಪರೀಕ್ಷೆ ಬರೆಯುವುದರಲ್ಲಿ ನಿರತರಾಗಿದ್ದ ಮಕ್ಕಳನ್ನು ಹೊರಗೆ ಕಳುಹಿಸಲಾಗಿದೆ ಎಂದು ಕಮಲ ಪಂತ್ ಮಾಹಿತಿ ನೀಡಿದ್ದಾರೆ.

1. ಮಹದೇವಪುರದ ಗೋಪಾಲನ್ ಇಂಟರ್​​ನ್ಯಾಷನಲ್ ಶಾಲೆ
2.ವರ್ತೂರು ಠಾಣಾ ವ್ಯಾಪ್ತಿಯ ಡೆಲ್ಲಿ ಪಬ್ಲಿಕ್ ಸ್ಕೂಲ್
3.ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯ ನ್ಯೂ ಅಕಾಡೆಮಿ ಸ್ಕೂಲ್
4. ಹೆಣ್ಣೂರು ಠಾಣಾ ವ್ಯಾಪ್ತಿಯ ಸೇಂಟ್​ ವಿನ್ಸೆಂಟ್ ಪೌಲ್ ಶಾಲೆ
5.ಗೋವಿಂದಪುರ ಠಾಣಾ ವ್ಯಾಪ್ತಿಯ ಇಂಡಿಯನ್ ಪಬ್ಲಿಕ್ ಸ್ಕೂಲ್

6.ಹೆಬ್ಬುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಎಬಿನೈಸರ್ ಸ್ಕೂಲ್

ಈ ಮೇಲಿನ ಶಾಲೆಗಳಲ್ಲಿ ಬಾಂಬ್ ಇಟ್ಟ ಸಂದೇಶ ಬಂದಿದೆ.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಜಾಪುರ ರಸ್ತೆಯಲ್ಲಿರುವ ಡೆಲ್ಲಿ ಪಬ್ಲಿಕ್ ಸ್ಕೂಲ್​ನಲ್ಲಿ ಪ್ರಬಲ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇ-ಮೇಲ್ ಬಂದಿದೆ. ಹೀಗಾಗಿ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ ಶ್ವಾನದಳದಿಂದ ಪರಿಶೀಲನೆ ನಡೆಯುತ್ತಿದೆ. ಮೆಟಲ್ ಡಿಟೆಕ್ಟರ್ ತಂಡದಿಂದಲೂ ಶಾಲೆಯಲ್ಲಿ ಪರಿಶೀಲನೆ ನಡೆಯುತ್ತಿದೆ. ಮಲಿಂದ ಬೊರೊನ್ ಇ-ಮೇಲ್ ಅಕೌಂಟ್​ನಿಂದ ಇ-ಮೇಲ್ ಬಂದಿದ್ದು ‘ದಿಸ್ ಇಸ್ ನಾಟ್ ಜೋಕ್’ ಎಂದು ಎಚ್ಚರಿಕೆ​ ನೀಡಿದ್ದಾರೆ.

ಇಮೇಲ್ ಸಿಕ್ಕ ಬಳಿಕ ಶಾಲೆ ವಿದ್ಯಾರ್ಥಿಗಳನೆಲ್ಲ ಬೇರೆಡೆಗೆ  ಕಳಿಸಿದರು ವಿಷಯ ತಿಳಿದು ಪೋಷಕರು ಶಾಲೆ ಬಳಿ ಜಮಾವಣೆಗೊಂಡರು. ಪೊಲೀಸರು ಶೋಧ ನಡೆಸಿದ್ದಾರೆ.

You might also like
Leave a comment