This is the title of the web page

ಬೈಕ್ ಅಪಘಾತ; ಇಬ್ಬರು ಸಹೋದರರ ಸಾವು

ಬೆಳಗಾವಿ, 10- ರಸ್ತೆ ಮಧ್ಯದ ವಿಭಜಕಕ್ಕೆ ಬೈಕ್ ಢಿಕ್ಕಿ ಹೊಡೆದು ಬಿದ್ದ ಕಾರಣ ಗೋಕಾಕ ಮೂಲದ ಇಬ್ಬರು ಸಹೋದರರು ಅಸುನೀಗಿದ ಘಟನೆ ಗುರುವಾರ ನಗರದಲ್ಲಿ ಸಂಭವಿಸಿದೆ.

ಉದ್ಯಮಬಾಗದ ಅಶೋಕ ಐರನ್ ಪ್ಲಾಂಟ್ ನಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ಕಿರಣ ಕಬಾಡಗಿ ಹಾಗೂ ಅವರ ಸಹೋದರ 19 ವರ್ಷದ ಕುಮಾರ ಕಬಾಡಗಿ ಅವರು ತಮ್ಮೊಬ್ಬ ಸಹೋದ್ಯೋಗಿಯೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಜಾಡ್ ಶಹಾಪುರ ಬಳಿ ರಸ್ತೆ ಡಿವೈಡರ್ ಗೆ ಅಪ್ಪಳಿಸಿದ್ದು, ಕೆಳಗೆ ಬಿದ್ದ ಇಬ್ಬರ ತಲೆಗಳಿಗೂ ತೀವ್ರವಾದ ಏಟು ಬಿದ್ದು ಸ್ಥಳದಲ್ಲೇ ಅವರು ಅಸುನೀಗಿದ್ದಾರೆ.

You might also like
Leave a comment