This is the title of the web page

ಎನರ್ಜಿ ಡ್ರಿಂಕ್ಸ ಸೇವಿಸಿ ಸಾವಿಗೀಡಾದ ಬಾಲಕ

ಮೆಕ್ಸಿಕೋ, ೨೭- ಚೈತನ್ಯದ ಚಿಲುಮೆಯಂತ್ತಿದ್ದ ಆರು ವರ್ಷದ ಫ್ರಾನ್ಸಿಸ್ಕೊ ​​​​ಸರ್ವಾಂಟೆಸ್ ಎಂಬ ಹೆಸರಿನ ಬಾಲಕ ಮಾನ‌ಸ್ಟರ್ ಹೆಸರಿನ ಎನರ್ಜಿ ಡ್ರಿಂಕ್ಸ್‌ (Energy Drinks) ಕುಡಿದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಈಶಾನ್ಯ ಮೆಕ್ಸಿಕೋದ ಮ್ಯಾಟಮೊರೊಸ್‌ನಲ್ಲಿ ನಡೆದಿದೆ.

ಕಳೆದ ಏಪ್ರಿಲ್ 16 ರಂದು ದುರ್ದೈವಿ ಫ್ರಾನ್ಸಿಸ್ಕೊ ​​​​ಸರ್ವಾಂಟೆಸ್ ತನ್ನ ಅಜ್ಜಿಯ ಮನೆಗೆ ಹೋಗುತ್ತಿದ್ದಾಗ ಬಾಯಾರಿಕೆಯನ್ನು ನೀಗಿಸಲು ಮಾನಸ್ಟರ್ ಎನರ್ಜಿ ಡ್ರಿಂಕ್ (ತಕ್ಷಣಕ್ಕೆ ಶಕ್ತಿ, ಚೈತನ್ಯ ನೀಡುವ ಪಾನೀಯ) ಸೇವಿಸಿದ್ದಾನೆ. ಆಗ ಅಸ್ವಸ್ಥಗೊಂಡು ಚಡಪಡಿಸಲಾರಂಭಿಸಿದಾಗ ಸಂಬಂಧಿಕರು ಕೂಡಲೇ ಅವನ್ನು ಸ್ಥಳೀಯ ಆಲಫ್ರೆಡೋ ಪುಮಾರೆಜೊ ಆಸ್ಪತ್ರೆಗೆ ಕರೆದೊಯ್ದರು.

ಬಾಲಕನನ್ನು ಪರೀಕ್ಷಿಸಿದ ವೈದ್ಯರು, ಈತ ಹೃದಯಾಘಾತದಿಂದ ಬಳಲುತ್ತಿದ್ದಾನೆ ಮತ್ತು ಅವನ ಮೆದುಳು ನಿಷ್ಕ್ರೀಯಗೊಂಡಿದೆ ಎಂದು ತಿಳಿಸಿದ್ದಾರೆ. ಇದಾದ ನಂತರ ​​ಆರು ದಿನಗಳ ಕಾಲ ಆತ ಕೋಮಾದಲ್ಲಿದ್ದು, ಕೊನೆಗೆ ಕೊನೆಯುಸಿರೆಳೆದಿದ್ದಾನೆ.

ವರದಿಯ ಪ್ರಕಾರ, ಸರ್ವಾಂಟೆಸ್ ಈಗಾಗಲೇ ಯಾವುದೇ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾನೆಯೇ ಅಥವಾ ಇಲ್ಲವೇ ಎಂಬುದು ತಿಳಿದಿಲ್ಲ. ಆದಾಗ್ಯೂ, ವಿವಿಧ ಆರೋಗ್ಯ ತಜ್ಞರು ಚಿಕ್ಕ ಮಕ್ಕಳಿಗೆ ಹೆಚ್ಚಿನ ಪ್ರಮಾಣದ ಕೆಫೀನ್ ಮತ್ತು ಸಕ್ಕರೆಯನ್ನು ಹೊಂದಿರುವ ಶಕ್ತಿ ಪಾನೀಯಗಳನ್ನು ಸೇವಿಸದಂತೆ ಸಲಹೆ ನೀಡಿದ್ದಾರೆ.

You might also like
Leave a comment