This is the title of the web page

ದೇವಸ್ಥಾನದ ಅನುದಾನ ಬಿಡುಗಡೆಗೆ ಲಂಚ; ತಹಶೀಲದಾರ ಬಂಧನ

ಬೆಳಗಾವಿ, 22- ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಮಂಜೂರಾಗಿದ್ದ ಅನುದಾನ ಬಿಡುಗಡೆಗಾಗಿ ಶೇ.5 ರಷ್ಟು ಲಂಚ ಕೇಳಿದ್ದ ಬೆಳಗಾವಿಯ ಮುಜರಾಯಿ ಇಲಾಖೆಯ ತಹಶೀಲದಾರ ಮತ್ತು ‌ಆತನ ಸಂಬಂಧಿಯನ್ನು ಭ್ರಷ್ಟಾಚಾರ ನಿರ್ಮೂಲನಾ ದಳ (ಎಸಿಬಿ)ದ ಅಧಿಕಾರಿಗಳು ಶುಕ್ರವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.

ಮುಜರಾಯಿ ತಹಶೀಲದಾರ ದಶರಥ ನಕುಲ ಜಾಧವ ಹಾಗೂ ಆತನ ಸಂಬಂಧಿ ಸಂತೋಷ ಕಡೋಲಕರ ಬಂಧಿತ ಆರೋಪಿಗಳಾಗಿದ್ದಾರೆ.

ರಾಮದುರ್ಗದಲ್ಲಿನ ಯಕಲಮ್ಮ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ಮುಜರಾಯಿ ಇಲಾಖೆಯ ಆರಾಧನಾ ಸ್ಕೀಮ್ ಅಡಿಯಲ್ಲಿ ರೂ.4 ಲಕ್ಷ ಮಂಜೂರಾಗಿತ್ತು. ಅನುದಾನ ಬಿಡುಗಡೆಗಾಗಿ ನಕುಲ ಜಾಧವ ಅವರು ರೂ.20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ದೇವಸ್ಥಾನದ ಸುಭಾಷ ಗೋಡಕೆ ಎಸಿಬಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿ ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳು ತಹಶೀಲ್ದಾರ ಪರವಾಗಿ ಲಂಚ ಸ್ವೀಕರಿಸುತ್ತಿದ್ದ ಆತನ ಸಂಬಂಧಿಯನ್ನು ಬಂಧಿಸಿದ್ದಾರೆ. ಬಳಿಕ ಇದೇ ಪ್ರಕರಣದಲ್ಲಿ ತಹಶೀಲದಾರ ಜಾಧವ ಅವರನ್ನೂ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

ಎಸಿಬಿ ಎಸ್ ಪಿ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಕರುಣಾಕರ ಶೆಟ್ಟಿ ನೇತೃತ್ವದಲ್ಲಿ ಇನ್ಸಪೆಕ್ಟರ್ ಗಳಾದ ಅಡಿವೇಶ ಗುದಿಗೊಪ್ಪ ಹಾಗೂ ಸುನಿಲಕುಮಾರ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದರು.

You might also like
Leave a comment