Live Stream

November 2022
W T F S S M T
 1
2345678
9101112131415
16171819202122
23242526272829
30  

| Latest Version 8.2.9 |

National News

ತೂಗುಸೇತುವೆ ಕುಸಿತ : ಬಿಜೆಪಿ ಸಂಸದನ ಕುಟುಂಬದ 12 ಮಂದಿ ಜಲಸಮಾದಿ


ಅಹಮ್ಮದಬಾದ : ಗುಜರಾತಿನ ಮೊರ್ಬಿ ನಗರದಲ್ಲಿ ಸುಮಾರು 140 ವರ್ಷಗಳಷ್ಟು ಹಳೆಯ, ಕೆಲ ದಿನಗಳ ಹಿಂದಷ್ಟೇ ನವೀಕರಣಗೊಂಡ ತೂಗು ಸೇತುವೆಯೊಂದು ಕುಸಿದು 137 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ದುರಂತ ಘಟನೆಯಲ್ಲಿ ಬಿಜೆಪಿ ಸಂಸದರೊಬ್ಬರ ಕುಟುಂಬದ 12 ಮಂದಿ ಅಸುನೀಗಿದ್ದಾರೆ.

ರಾಜಕೋಟ‌ ನ ಬಿಜೆಪಿ ಸಂಸದ ಮೋಹನ‌ ಭಾಯ ಕಲ್ಯಾಣ‌ಜಿ ಕುಂದರಿಯಾ ಅವರ ಹನ್ನೆರಡು ಕುಟುಂಬ ಸದಸ್ಯರು ಪ್ರಾಣ ಕಳೆದುಕೊಂಡಿದ್ದಾರೆ.

ನಾನು ಐದು ಮಕ್ಕಳು ಸೇರಿದಂತೆ ನನ್ನ ಕುಟುಂಬದ 12 ಸದಸ್ಯರನ್ನು ಕಳೆದುಕೊಂಡಿದ್ದೇನೆ. ನನ್ನ ಸಹೋದರಿಯ ಕುಟುಂಬದಿಂದ ಬಂದ ಸದಸ್ಯರನ್ನು ಕಳೆದುಕೊಂಡಿದ್ದೇನೆ ಎಂದು ಮೋಹನ‌ಭಾಯ ಕಲ್ಯಾಣ‌ಜಿ ಕುಂದರಿಯಾ ಹೇಳಿದರು.

ರಕ್ಷಣಾ ಕಾರ್ಯಾಚರಣೆಗೆ ತುರ್ತು ರಕ್ಷಣಾ ತಂಡಗಳನ್ನು ಸಜ್ಜುಗೊಳಿಸುವಂತೆ ಮತ್ತು ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಗೆ ಪ್ರಧಾನಿ ಮೋದಿ ಹಾಗೂ ಗುಜರಾತ್ ಮುಖ್ಯಮಂತ್ರಿ ಪಟೇಲ್ ಸೂಚನೆ ನೀಡಿದ್ದಾರೆ. ಈಗಾಗಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಪರಿಹಾರ ಘೋಷಣೆ ಮಾಡಲಾಗಿದೆ.


A B Dharwadkar
the authorA B Dharwadkar

Leave a Reply